ಜಿಲ್ಲೆ

ಕುಂದೇಶ್ವರದಲ್ಲಿ ನಿವೃತ್ತ ನೌಕರರ ಸಂಘ ಸಭೆ

ಕುಂದಾಪುರ: ಕುಂದಾಪುರ ತಾಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದ ಸಾಮಾನ್ಯ ಸಭೆ ಕುಂದೇಶ್ವರ ದೇವಸ್ಥಾನ ಸಭಾಭವನದಲ್ಲಿ ಶನಿವಾರ ಜರುಗಿತು.

ಸಂಘದ ಅಧ್ಯಕ್ಷ ವಕ್ವಾಡಿ ಭಾಸ್ಕರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ತೋಟಗಾರಿಕೆ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಕುಚೇಲಯ್ಯ ಹಾಗೂ ಸಹಾಯಕ ಹರೀಶ್ ಅವರು ತೋಟಗಾರಿಕಾ ಸಸ್ಯಗಳು ಹಾಗೂ ಕಸಿ ಕಟ್ಟುವ ವಿಧಾನಗಳ ಕುರಿತು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು. ಸಂಘದ ಸದಸ್ಯತ್ವ ಸ್ವೀಕರಿಸಿದ ಮಲ್ಯಾಡಿ ಪ್ರಭಾಕರ ಶೆಟ್ಟಿ ಹಾಗೂ ಜನ್ಮ ದಿನಾಚರಣೆ ಆಚರಿಸಿಕೊಂಡ ಸದಸ್ಯರಾದ ಸಾವಿತ್ರಿ ಕೆ., ಸರೋಜಿನಿ ಕೆ., ಎಚ್.ಸೀತಾರಾಮ ಶೆಟ್ಟಿ ಅವರನ್ನು ಗೌರವಿಸಲಾಯಿತು. ಗೌರವ ಸಲಹೆಗಾರ ಸಿ.ಎಚ್.ಜಗನ್ನಾಥ ಶೆಟ್ಟಿ ಉಪಸ್ಥಿತರಿದ್ದರು.

ಸದಸ್ಯೆ ಗೀತಾ ಕಾರಂತ ಪ್ರಾರ್ಥಿಸಿದರು. ಕಾರ್ಯದರ್ಶಿ ಪದ್ಮನಾಭ ಅಡಿಗ ಸ್ವಾಗತಿಸಿದರು. ಸದಸ್ಯ ಕಿರಣ್ ಕುಮಾರ್ ಬಿ. ಕಾರ್ಯಕ್ರಮ ನಿರೂಪಿಸಿದರು. ಖಜಾಂಚಿ ಶಂಕರ ಪೂಜಾರಿ ವಂದಿಸಿದರು.