ಹೆಬ್ರಿ ಪಿಆರ್‌ಎನ್ ಅಮೃತ ಭಾರತಿ ವಿದ್ಯಾಲಯದ ವಸತಿ ನಿಲಯದ ವಿದ್ಯಾರ್ಥಿಗಳು ಅಂಪಾರು ವಾಗ್ಜೋತಿ ಶ್ರವಣದೋಷವುಳ್ಳ ವಸತಿ ನಿಲಯದ ಶಾಲೆಗೆ ಶನಿವಾರ ಭೇಟಿ ನೀಡಿ ದವಸ ಧಾನ್ಯ, ಸಿಹಿ ತಿಂಡಿ ವಿತರಿಸಿದರು 
ಜಿಲ್ಲೆ

ವಾಗ್ಜೋತಿ ಶ್ರವಣದೋಷವುಳ್ಳ ವಸತಿ ಶಾಲೆಗೆ ಭೇಟಿ

ಇಂದಿರಾ ಎನ್ ಕೆ

ಹೆಬ್ರಿ: ಹೆಬ್ರಿ ಪಿಆರ್‌ಎನ್ ಅಮೃತ ಭಾರತಿ ವಿದ್ಯಾಲಯದ ವಸತಿನಿಲಯದ ವಿದ್ಯಾರ್ಥಿಗಳು ಅಂಪಾರು ವಾಗ್ಜೋತಿ ಶ್ರವಣದೋಷವುಳ್ಳ ವಸತಿ ನಿಲಯದ ಶಾಲೆಗೆ ಶನಿವಾರ ಭೇಟಿ ನೀಡಿ ದವಸ ಧಾನ್ಯ, ಸಿಹಿ ತಿಂಡಿ ವಿತರಿಸಿದರು.

ವಾಗ್ಜೋತಿ ಸಂಸ್ಥೆ ಮುಖ್ಯಶಿಕ್ಷಕ ಎಚ್.ರವೀಂದ್ರ, ಗಾಂಧಿ ಆಸ್ಪತ್ರೆ ನಿರ್ದೇಶಕ ಡಾ.ಹರೀಶ್ಚಂದ್ರ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಿದರು. ಅಮೃತ ಭಾರತಿ ವಿದ್ಯಾಲಯದ ಮುಖ್ಯಶಿಕ್ಷಕಿ ಅಪರ್ಣಾ ಆಚಾರ್, ಉಪನ್ಯಾಸಕ ವೇದವ್ಯಾಸ ತಂತ್ರಿ, ಸಂಸ್ಥೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.