ಗುಳೇದಗುಡ್ದದಲ್ಲಿ ರಸ್ತೆ ನಿರ್ಮಿಸುವಂತೆ ಆಗ್ರಹಿಸಿ ಬಿಜೆಪಿ ವತಿಯಿಂದ ಉಪತಹಸೀಲ್ದಾರ್ ವೀರೇಶ ಬಡಿಗೇರ ಅವರಿಗೆ ಮನವಿ ಸಲ್ಲಿಸಲಾಯಿತು. ವಸಂತಸಾ ಧೋಂಗಡೆ, ರವಿ ಅಂಗಡಿ, ಭುವನೇಶ ಪೂಜಾರ, ಪ್ರಶಾಂತ ಜವಳಿ, ಪ್ರಕಾಶ ರೋಜಿ ಇತರರಿದ್ದರು. 
ಜಿಲ್ಲೆ

ರಸ್ತೆ ನಿರ್ಮಿಸುವಂತೆ ಆಗ್ರಹಿಸಿ ಮನವಿ

ಗಿರೀಶ ಸಗರ

ಗುಳೇದಗುಡ್ಡ : ನಗರದ ಗುಲಾಬ್ ಟಾಕೀಸ್‌ನಿಂದ ಹರದೊಳ್ಳಿಯ ಮಾರುತೇಶ್ವರ ದೇವಸ್ಥಾನದವರೆಗಿನ ಗುಳೇದಗುಡ್ಡ-ಇಳಕಲ್ಲ ರಸ್ತೆಯನ್ನು ಕೂಡಲೆ ದುರಸ್ತಿಗೊಳಿಸುವಂತೆ ಆಗ್ರಹಿಸಿ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಉಪತಹಸೀಲ್ದಾರ್ ವೀರೇಶ ಬಡಿಗೇರ ಅವರಿಗೆ ಮನವಿ ಸಲ್ಲಿಸಿದರು.

ರಸ್ತೆಯುದ್ದಕ್ಕೂ ಗುಂಡಿಗಳು ಬಿದ್ದು ವಾಹನ ಸಂಚಾರಕ್ಕೆ ತೀವ್ರ ತೊಂದರೆಯುಂಟಾಗಿದೆ. ರಸ್ತೆ ನಿರ್ಮಿಸುವಂತೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ನಿರ್ಲಕ್ಷೃ ವಹಿಸಿದ್ದಾರೆ. ಮೂವತ್ತು ದಿನಗಳಲ್ಲಿ ರಸ್ತೆಯನ್ನು ಸಂಪೂರ್ಣವಾಗಿ ನಿರ್ಮಿಸಬೇಕು.

ಇಲ್ಲವಾದರೆ ಸಾರ್ವಜನಿಕರೊಂದಿಗೆ ರಸ್ತೆತಡೆ ಮಾಡಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

ಬಿಜೆಪಿ ನಗರ ಘಟಕದ ಅಧ್ಯಕ್ಷ ವಸಂತಸಾ ಧೋಂಗಡೆ, ರವಿ ಅಂಗಡಿ, ಭುವನೇಶ ಪೂಜಾರ, ಪ್ರಶಾಂತ ಜವಳಿ, ಪ್ರಕಾಶ ರೋಜಿ, ಮಹೇಶ ಸೂಳಿಭಾವಿ, ಪ್ರವೀಣ ದೇವಗಿರಕರ, ಮುತ್ತು ಚಿಕ್ಕನರಗುಂದ, ವಿಜಯ ಕವಿಶೆಟ್ಟಿ, ಶಿವು ಬಾದವಾಡಗಿ, ಮಹಾಂತೇಶ ಹಿರೇಮಠ, ವೀರೇಶ ಉಂಕಿ, ಮಲ್ಲು ಹೆಗಡೆ ಇತರರಿದ್ದರು.