ಲಿಂಗಸುಗೂರು ಎಸಿ ಕಚೇರಿ ಎಫ್‌ಡಿಸಿ ಆದಪ್ಪಗೆ ನಮ್ಮ ಕರವೇ ಕಾರ್ಯಕರ್ತರು ಮನವಿ ಸಲ್ಲಿಸಿದರು. ತಾಲೂಕು ಅಧ್ಯಕ್ಷ ತಿಮ್ಮಾರಡ್ಡಿ ಮುನ್ನೂರು, ಪ್ರಮುಖರಾದ ಮೌನೇಶ ರಡ್ಡಿ, ರಮೇಶ ಗುತ್ತೇದಾರ, ರವಿ ಗೊರೇಬಾಳ, ಸಚಿನ್, ರಮೇಶ ಸರ್ಜಾಪುರ, ದೇವರಾಜ, ರಾಮಚಂದ್ರ ರಡ್ಡಿ, ಚನ್ನಗಿರಿ, ತುಕಾರಾಮ, ಅರವಿಂದ ರಡ್ಡಿ, ಪ್ರವೀಣ ಕುಮಾರ, ರಾಮು ದಳಪತಿ, ಅಮರ್, ಸಂತೋಷ, ಶಶಾಂಕ, ಈರಣ್ಣ ರಡ್ಡಿ ಇದ್ದರು. 
ಜಿಲ್ಲೆ

ಬಾಡಿಗೆ ಅಕ್ರಮ ವಸೂಲಿಕಾರರ ವಿರುದ್ಧ ಕ್ರಮವಾಗಲಿ

ಲಿಂಗಸುಗೂರು: ಬೀದಿಬದಿ ವ್ಯಾಪಾರಿಗಳಿಂದ ಕೆಲವರು ಅಕ್ರಮವಾಗಿ ಬಾಡಿಗೆ ವಸೂಲಿ ಮಾಡುತಿದ್ದು, ಇದಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿ ನಮ್ಮ ಕರವೇ ಕಾರ್ಯಕರ್ತರು ಎಸಿ ಕಚೇರಿ ಎಫ್‌ಡಿಸಿ ಆದಪ್ಪಗೆ ಬುಧವಾರ ಮನವಿ ಸಲ್ಲಿಸಿದರು.

ಪಟ್ಟಣದ ಬೈಪಾಸ್ ರಸ್ತೆ, ಬಸ್ ನಿಲ್ದಾಣ ವೃತ್ತ, ಅಂಚೆ ಕಚೇರಿ ರಸ್ತೆ, ಬಸವಸಾಗರ ವೃತ್ತ, ಗಡಿಯಾರ ಚೌಕ್ ಸೇರಿ ಪ್ರಮುಖ ರಸ್ತೆ ಬದಿಯಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡುತ್ತಿದ್ದು,

ಪುರಸಭೆಯಿಂದ ಬಾಡಿಗೆ ಪಡೆಯದಿದ್ದರೂ ಕೆಲವರು ಖಾಲಿ ಸ್ಥಳಕ್ಕೆ ಗುಂಡಾಗಿರಿ ಮೂಲಕ ಹಣ ವಸೂಲಿ ಮಾಡುತ್ತಿದ್ದಾರೆ. ಕೆಲ ಪ್ರಭಾವಿ ವ್ಯಕ್ತಿಗಳು ಹತ್ತಾರು ತಳ್ಳು ಬಂಡಿಗಳನ್ನು ಬಾಡಿಗೆ ನೀಡುವ ಮೂಲಕ ತಿಂಗಳಿಗೆ ಹದಿನೈದು ಸಾವಿರ ರೂ.ನಂತೆ ಹಣ ವಸೂಲಿ ಮಾಡುತ್ತಿದ್ದು,

ಬೀದಿ ಬದಿ ವ್ಯಾಪಾರಿಗಳ ಜೀವನ ರಕ್ಷಣೆ ಮತ್ತು ಬೀದಿ ವ್ಯಾಪಾರ ನಿಯಂತ್ರಣ ಕಾಯ್ದೆ ಪ್ರಕಾರ ಒಬ್ಬರಿಗೆ ಒಂದು ತಳ್ಳು ಬಂಡಿ ಇಡಲು ಅವಕಾಶ ನೀಡಬೇಕು ಎಂದರು.