ಜಿಲ್ಲೆ

ಚಡ್ಡಿ ವಾರ್​: ಹಿಂದು ಸಂಘಟನೆಯಿಂದ ಮಾಜಿ ಸಿಎಂ ಸಿದ್ದರಾಮಯ್ಯ, ನಲಪಾಡ್​ಗೆ ಚಡ್ಡಿ ಪಾರ್ಸಲ್​!

mahalakshmihm

ಚಿತ್ರದುರ್ಗ: ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವಿನ ಚಡ್ಡಿ ವಾರ್ ನಿರ್ಣಾಯಕ ಹಂತಕ್ಕೆ ತಲುಪಿದ್ದು, ಚಡ್ಡಿ ಕುರಿತ ಹೇಳಿಕೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೊನೆಗೂ ಹಿಂದು ಸೇನೆಯಿಂದ ಚಡ್ಡಿ ಕಳುಹಿಸಿಕೊಡಲಾಗಿದೆ.

RSS ಚಡ್ಡಿಗಳನ್ನು ರಾಜ್ಯಾದ್ಯಂತ ಸುಡಲಾಗುವುದು ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಕೊನೆಗೆ ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ಹಿಂದು ಸಂಘಟನೆಯ ಸದಸ್ಯರು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ನಲಪಾಡ್ ಅವರ ವಿಳಾಸಕ್ಕೆ ಕೊರಿಯರ್​ ಮಾಡಿದ್ದಾರೆ.

ನೀವು ಇಬ್ಬರು ಎಲ್ಲೂ ಹೋಗಿ ಚಡ್ಡಿಗಳನ್ನು ಸುಡಬೇಡಿ ನಮ್ಮ ಹಳೆಯ ಚಡ್ಡಿಗಳು ಕಳುಹಿಸಿದ್ದೇವೆ ಇವನ್ನೇ ಸುಡಿ ಎಂದು ಪತ್ರವನ್ನೂ ಬರೆದಿದ್ದೇವೆ ಎಂದು ವಿಶ್ವ ಹಿಂದು ಪರಿಷತ್ ಹಾಗೂ ಭಜರಂಗದಳ ಕಾರ್ಯಕರ್ತ ಶ್ರೀನಿವಾಸ ಮಸ್ಕಲ್ ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​)