ಶ್ರೀ ಮಠ ಬಾಳೆಕುದ್ರುವಿನಲ್ಲಿ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಚಂಡಿಕಾಯಾಗ ಇನ್ನಿತರ ಧಾರ್ಮಿಕ ಕಾರ್ಯಕ್ರಮದಲ್ಲಿ ಸೇವಾಕರ್ತರಾಗಿ ಮಣಿಪಾಲದ ವಕೀಲ ಶ್ರೀನಿವಾಸ ನಾಯಕ್ ಪೂಜಾ ವಿಧಿವಿಧಾನದಲ್ಲಿ ಭಾಗಿಯಾದರು 
ಜಿಲ್ಲೆ

ಬಾಳೆಕುದ್ರು ಶ್ರೀ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮ ಸಂಪನ್ನ

ಇಂದಿರಾ ಎನ್ ಕೆ

ಕೋಟ: ಶ್ರೀ ಮಠ ಬಾಳೆಕುದ್ರುವಿನಲ್ಲಿ ಶರನ್ನವರಾತ್ರಿ ಅಂಗವಾಗಿ ಚಂಡಿಕಾಯಾಗ ಇನ್ನಿತರ ಧಾರ್ಮಿಕ ಕಾರ್ಯಕ್ರಮ ಜರುಗಿತು. ಮಣಿಪಾಲದ ವಕೀಲ ಶ್ರೀನಿವಾಸ ನಾಯಕ್ ಪೂಜಾ ವಿಧಿವಿಧಾನದಲ್ಲಿ ಭಾಗಿಯಾದರು. ಶ್ರೀ ಮಠ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜಶೇಖರ ಕಲ್ಕೂರ, ಸದಸ್ಯ ಪಾಮರ ಚಡಗ, ವ್ಯವಸ್ಥಾಪಕ ಮಂಜುನಾಥ ಭಟ್ ಉಪಸ್ಥಿತರಿದ್ದರು. ಶ್ರೀ ಮಠ ಬಾಳೆಕುದ್ರು ಶರನ್ನವರಾತ್ರಿ ಅಂಗವಾಗಿ ಶ್ರೀ ರಾಮ ನಾಮ ಸಂಕೀರ್ತನಾ ಮಹಿಳಾ ಕುಣಿತ ಭಜನಾ ತಂಡ ಕುಂಭಾಶಿ, ಕುಂದಾಪುರ ಅವರಿಂದ ಭಜನಾ ಸಂಕೀರ್ತನೆ ಸಂಪನ್ನವಾಯಿತು.