ಜಿಲ್ಲೆ

ಶರುವೂರು ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಕ್ರಮ : ಶಿರೂರು ಮಠದ ವೇದವರ್ಧನ ಶ್ರೀಗಳ ನೇತೃತ್ವ

ಸೌಮ್ಯ ಆರ್

ಕಡಬ: ಅಲಂಕಾರು ಗ್ರಾಮದ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಉಡುಪಿಯ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನವಾದ ಶೀರೂರು ಮಠದ ಭಾವಿ ಪರ್ಯಾಯ ಪೀಠಾಧೀಶ ವೇದವರ್ಧನ ತೀರ್ಥ ಸ್ವಾಮೀಜಿಗಳ ವತಿಯಿಂದ ಚಂಡಿಕಾ ಹೋಮ, ಸುಹಾಸಿನಿ ಪೂಜೆ ಮತ್ತು ಅನ್ನಸಂತರ್ಪಣೆ ಇತ್ತೀಚೆಗೆ ನಡೆಯಿತು.

ಕ್ಷೇತ್ರದ ತಂತ್ರಿ ಕುಡುಪು ಕೃಷ್ಣರಾಜ ತಂತ್ರಿಗಳ ನೇತೃತ್ವದಲ್ಲಿ ಚಂಡಿಕಾ ಹೋಮ, 60 ಸುಹಾಸಿನಿ ಆರಾಧನೆ, ಶ್ರೀಗಳ ಭಿಕ್ಷಾ ಕಾರ್ಯಕ್ರಮ ಮತ್ತು ಅನ್ನಸಂತರ್ಪಣೆ ನೆರವೇರಿದವು. ದೇವಸ್ಥಾನದ ಪವಿತ್ರಪಾಣಿ ಎನ್.ಹರೀಶ ಆಚಾರ್ಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಮಣ್ಯ ರಾವ್, ಪ್ರಮುಖರಾದ ರಂಗನಾಥ ಉಂಗ್ರುಪುಳಿತಾಯ, ಕೃಷ್ಣರಾಜ ಎರ್ಕಡಿತ್ತಾಯ, ಹರಿಪ್ರಸಾದ್ ದಾಳಿಂಬ, ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ಸದಸ್ಯರು ಇದ್ದರು.