ಮಕ್ಕಳಿಗೆ ಅಗತ್ಯ ಮಣ್ಣಿನ ಜೀವನದ ಅರಿವು : ನಾಸೀರ್ ಕೆ.ಕೆ. ಅಭಿಪ್ರಾಯ

New Project (38)
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಮನುಷ್ಯನ ಸೃಷ್ಟಿ ಮಣ್ಣಿನಿಂದಾಗಿದ್ದು ಬದುಕು ಕೂಡ ಮಣ್ಣಿನಲ್ಲೇ ಇದೆ ಎನ್ನುವುದನ್ನು ಭಗವಂತ ಕಲ್ಪಿಸಿಕೊಟ್ಟಿದ್ದಾನೆ. ಆದರೆ ಪ್ರಸ್ತುತ ದಿನಗಳಲ್ಲಿ ಆಧುನಿಕತೆ ಅಬ್ಬರಕ್ಕೆ ಜನ ಎಲ್ಲವನ್ನೂ ಮರೆತಿದ್ದು, ಈ ನಿಟ್ಟಿನಲ್ಲಿ ಮಕ್ಕಳಿಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಉಳ್ಳಾಲ ತಾಲೂಕು ಜಮೀಯತುಲ್ ಫಲಾಹ್ ಅಧ್ಯಕ್ಷ ಅಬ್ದುಲ್ ನಾಸೀರ್ ಕೆ.ಕೆ. ಅಭಿಪ್ರಾಯಪಟ್ಟರು.

ಕೊಣಾಜೆ, ಮಂಗಳ ಗ್ರಾಮೀಣ ಯುವಕ ಸಂಘ, ನಾಗಬ್ರಹ್ಮ ಸ್ವಸಹಾಯ ಸಂಘ ಕೆಳಗಿನಮನೆ, ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಹಾಗೂ ಕೊಣಾಜೆಪದವು ಶಾಲಾಭಿವೃದ್ಧಿ ಸಮಿತಿ ಕೊಣಾಜೆ ಪ್ರೌಢಶಾಲಾ ರಾಷ್ಟ್ರೀಯ ಸೇವಾ ಯೋಜನೆ ಆಶ್ರಯದಲ್ಲಿ ಕೊಣಾಜೆಪದವು ಶಾಲೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕೆಳಗಿನಮನೆ ಬಳಿ ಮಂಗಳವಾರ ‘ಕೆಸರು ಗದ್ದೆಯಲ್ಲೊಂದು ದಿನ ಹಾಗೂ ಕೃಷಿ ಖುಷಿ’ ವಿಶೇಷ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉಳ್ಳಾಲ ವಲಯ ಬಂಟರ ಸಂಘದ ಅಧ್ಯಕ್ಷ ರವೀಂದ್ರ ರೈ ಕಲ್ಲಿಮಾರ್ ಮಾತನಾಡಿ, ಪ್ರಕೃತಿ, ವಿದ್ಯೆ, ಗುರು-ಹಿರಿಯರನ್ನು ಪ್ರೀತಿಸಿ ಗೌರವಿಸುವುದು ಮಾನವ ಸಂಸ್ಕೃತಿಯಾದರೆ, ಪರಿಸರವನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಳ್ಳುವುದು ಪ್ರಕೃತಿ ಸಂಸ್ಕಾರ. ಈ ಕಾರ್ಯ ಶಾಲಾ ಜೀವನದಲ್ಲೇ ಮಕ್ಕಳಿಗೆ ನೀಡುವ ಅಗತ್ಯವಿದೆ ಎಂದರು.

ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್, ಸಮಾಜ ಸೇವಕ ಸುರೇಂದ್ರ ರೈ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಲತೀಫ್ ಕೋಡಿಜಾಲ್, ಕೃಷಿಕ ದಯಾನಂದ ಗಟ್ಟಿ, ಕೊಣಾಜೆ ಗ್ರಾಪಂ ಸದಸ್ಯರಾದ ಶಶಿಕಲಾ, ಕಾರ್ತಿಕ್, ಮಾಜಿ ಸದಸ್ಯ ಹಸನ್ ಕುಂಞಿ, ಶಾಲಾಭಿವೃದ್ಧಿ ಸಮಿತಿ ಅಬ್ದುಲ್ ಖಾದರ್, ಅಶ್ರಫ್, ಮುಖ್ಯಶಿಕ್ಷಕಿ ಗಾಯತ್ರಿ ಎಂ., ಸಿಲ್ಪಿಯಾ ಮಿನೇಜಸ್ ಮೊದಲಾದವರು ಉಪಸ್ಥಿತರಿದ್ದರು.

ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಅಚ್ಯುತ ಗಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳ ಗ್ರಾಮೀಣ ಯುವಕ ಸಂಘದ ಅಧ್ಯಕ್ಷ ಎ.ಕೆ.ಅಬ್ದುಲ್ ರಹ್ಮಾನ್ ಕೋಡಿಜಾಲ್ ವಂದಿಸಿದರು

15 ವರ್ಷಗಳಿಂದ ಈ ಭಾಗದಲ್ಲಿ ಶಾಲೆ, ಕಾಲೇಜಿನ ವಿದ್ಯಾರ್ಥಿಗಳಿಗೆ ಕೃಷಿ ಮಾಹಿತಿ, ಪರಿಸರ ಮಾಹಿತಿ, ಭತ್ತ ನಾಟಿ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಜತೆಗೆ ವಿದ್ಯಾರ್ಥಿಗಳ ಸಂತೋಷಕ್ಕಾಗಿ ಗದ್ದೆಯಲ್ಲಿ ಕ್ರೀಡಾಕೂಟ ಆಯೋಜಿಸುತ್ತಾ ಬರಲಾಗಿದೆ. ಅಚ್ಯುತ ಗಟ್ಟಿ, ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ https://www.vijayavani.net/uncommenced-commercial-building-work https://www.vijayavani.net/inauguration-of-busstand

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net