ಜಿಲ್ಲೆ

ಧಾರ್ಮಿಕ, ಸಾಂಸ್ಕೃತಿಕ ಜಾಗೃತಿ ಅಭಿನಂದನೀಯ

Avinash R

ವಿಜಯವಾಣಿ ಸುದ್ದಿಜಾಲ ಹಳೆಯಂಗಡಿ

ಯಕ್ಷಗಾನ ಸೇವೆ ಮೂಲಕ ಎಳೆಯರಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪ್ರಜ್ಞೆ ಮೂಡಿಸುವ ಕಾರ್ಯ ಅಭಿನಂದನೀಯ ಎಂದು ಕಟೀಲು ದೇಗುಲದ ಆನುವಂಶಿಕ ಅರ್ಚಕ ವೆಂಕಟ್ರಮಣ ಆಸ್ರಣ್ಣ ಹೇಳಿದರು.

ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಿರು ಷಷ್ಠಿ ಜಾತ್ರಾ ಮಹೋತ್ಸವ ಪ್ರಯುಕ್ತ ಊರ ಪರವೂರ ಹತ್ತು ಸಮಸ್ತರು ಮತ್ತು ಯಕ್ಷ ಕಲಾರಂಗ ತೋಕೂರು ವತಿಯಿಂದ ಕಟೀಲು ಮೇಳದವರಿಂದ ನಡೆದ 15ನೇ ವರ್ಷದ ಯಕ್ಷಗಾನ ಬಯಲಾಟ ಶ್ರೀದೇವಿ ಮಹಾತ್ಮೆ ಸಂದರ್ಭ ಆಶೀರ್ವಚನ ನೀಡಿದರು.

ಕಟೀಲು ಮೇಳದ ಹಿರಿಯ ಕಲಾವಿದರಾದ ನಾರಾಯಣ ಕುಲಾಲ್, ರವಿ ಮುಂಡಾಜೆ, ಸಂದೀಪ್ ಕೋಳ್ಯೂರು, ಭಾಗವತರಾದ ಸತೀಶ್ ಶೆಟ್ಟಿ ಬೋಂದೆಲ್, ಸುಬ್ರಹ್ಮಣ್ಯ ದೇವಳದ ಸೇವಾಕರ್ತರಾದ ವೆಂಕಪ್ಪ ಶೆಟ್ಟಿ ಮೂಡುಮನೆ, ಸುಮತಿ ದೇವಾಡಿಗ ಅವರನ್ನು ರಂಗಸ್ಥಳದಲ್ಲಿ ಸನ್ಮಾನಿಸಲಾಯಿತು.

ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುರಾಜ ಎಸ್.ಪೂಜಾರಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸವಿತಾ ಶರತ್ ಬೆಳ್ಳಾಯರು, ಅಶೋಕ್ ಕುಂದರ್, ಪುರುಷೋತ್ತಮ ಕೋಟ್ಯಾನ್, ಸಂಪತ್ ಶೆಟ್ಟಿ ತೋಕೂರು ಗುತ್ತು, ವಾಜಿ ಅಧ್ಯಕ್ಷ ಹರಿದಾಸ್ ಭಟ್, ಯುವಕ ಸಂದ ಅಧ್ಯಕ್ಷ ರಮೇಶ್ ದೇವಾಡಿಗ, ಶ್ರೀ ಸುಬ್ರಹ್ಮಣ್ಯ ಮಹಾ ಗಣಪತಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ದೀಪಕ್ ಸುವರ್ಣ, ಗಜಾನನ ಸ್ಪೋರ್ಟ್ಸ್ ಕ್ಲಬ್‌ನ ನವೀನ್ ಶೆಟ್ಟಿಗಾರ್, ಪತ್ರಕರ್ತರಾದ ರಮೇಶ್ ಅಮೀನ್ ಮುಂಬೈ, ಗಣೇಶ್ ದೇವಾಡಿಗ ಪಂಜ, ಯಕ್ಷ ಕಲಾರಂಗದ ಭಾಸ್ಕರ್ ದೇವಾಡಿಗ, ಹಿಮಕರ್ ಕೋಟ್ಯಾನ್, ಗಣೇಶ್ ಪೂಜಾರಿ ತೋಕೂರು, ಸಂತೋಷ್ ಕುವಾರ್, ಶಿವ ದೇವಾಡಿಗ, ಸಂಪತ್ ದೇವಾಡಿಗ, ಅಕ್ಷಯ್ ಭಂಡಾರಿ, ಸೋಮನಾಥ, ಸಂತೋಷ್ ದೇವಾಡಿಗ, ಸುರೇಶ್ ಶೆಟ್ಟಿ ಮೊದಲಾದವರಿದ್ದರು.