ಜಿಲ್ಲೆ

ಧರ್ಮ,ರಾಷ್ಟ್ರೀಯತೆ ಶ್ರೀ ವಿಶ್ವೇಶತೀರ್ಥರ ಉಸಿರು: ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅಭಿಮತ

ಬೆಂಗಳೂರು: ಹಿಂದು ಧರ್ಮ, ರಾಷ್ಟ್ರೀಯತೆ, ಸಮಾಜದ ಬಗ್ಗೆ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅತೀವ ಪ್ರೀತಿ ಮತ್ತು ವಿಶ್ವಾಸ ಇಟ್ಟುಕೊಂಡಿದ್ದರು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.

ಅಖಿಲ ಭಾರತ ಮಾದ್ವ ಮಹಾಮಂಡಲ ಹಾಗೂ ಪೂರ್ಣಪ್ರಜ್ಞ ವಿದ್ಯಾಪಿಠ ಪ್ರತಿಷ್ಠಾನ ವತಿಯಿಂದ ಪೂರ್ಣಪ್ರಜ್ಞ ವಿದ್ಯಾಪಿಠದಲ್ಲಿ ಶ್ರೀ ವಿಶ್ವೇಶತೀರ್ಥ ಪಾದರ ಪಂಚಮ ಮಹಾ ಸಮಾರಾಧನೆ ಹಾಗೂ ತತ್ವಾನ ಮಹೋತ್ಸವ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು.

ವಿಶ್ವೇಶತೀರ್ಥ ಸ್ವಾಮೀಜಿ ತ್ಯಾಗದ ಜೀವನ ನಡೆಸಿ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣರಾಗಿ ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ. ಧಾರ್ಮಿಕ, ಶಿಕ್ಷಣ, ಆರೋಗ್ಯ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಪ್ರೋತ್ಸಾಹ ನೀಡಿದ್ದರು. ದಲಿತರ ಕೇರಿಗಳಿಗೆ ತೆರಳಿ ಕಷ್ಟಗಳನ್ನು ಆಲಿಸುತ್ತಿದ್ದರು. ಹಿಂದುಳಿದ ಮತ್ತು ದಲಿತರ ಶ್ರಯೋಭಿವೃದ್ಧಿಗೆ ಮಹೋನ್ನತ ಕಾರ್ಯ ಮಾಡಿದವರು. ಈ ಮೂಲಕ ಎಲ್ಲರನ್ನೂ ಸಮಾನಾಗಿ ಕಾಣುತ್ತಿದ್ದ ವಿಶ್ವೇಶತೀರ್ಥರ ಮಾರ್ಗದಲ್ಲಿ ಸಾಗುವುದೇ ಅವರಿಗೆ ನೀಡುವ ದೊಡ್ಡ ಗೌರವ ಎಂದರು.

ಶ್ರೀಗಳ ವ್ಯಕ್ತಿತ್ವವನ್ನು ನಾನು ಅಳವಡಿಸಿಕೊಂಡಿದ್ದೇನೆ. ಶ್ರೀಗಳ ಜತೆಗೆ ಇದ್ದಿದ್ದು ನನ್ನ ಪುಣ್ಯ. ವಿದ್ಯಾರ್ಥಿಗಳು, ಶಿಷ್ಯಂದಿರು ಕಂಡರೆ ಅವರಿಗೆ ತುಂಬ ಪ್ರೀತಿ. ಅವರೊಬ್ಬ ತ್ಯಾಗಮಯಜೀವಿ ಆಗಿದ್ದರು. ಹಿಂದಿನ ಶ್ರೀಗಳು ಹಾಕಿಕೊಟ್ಟಿರುವ ಮಾರ್ಗದಲ್ಲಿ ಈಗಿನ ಶ್ರೀಗಳು ಒಳ್ಳೆಯ ಕಾರ್ಯ ಮಾಡುತ್ತಿದ್ದಾರೆ. ಮಠದ ಕಾರ್ಯಗಳಿಗೆ ನಮ್ಮ ಪ್ರೋತ್ಸಾಹ ಸದಾ ಇರಲಿದೆ ಎಂದು ಡಾ. ಹೆಗ್ಗಡೆ ತಿಳಿಸಿದರು. ಕಾರ್ಯಕ್ರಮದಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಆಧ್ಯಾತ್ಮಿಕ ಚಿಂತಕ ಬಿ.ಎನ್​.ವಿಜಯೀಂದ್ರ ಆಚಾರ್ಯ, ಆಕ್ಸಿಲೊರ್​ ವೆಂಚರ್ಸ್​ ಪ್ರೈ. ಲಿ.ನ ಶ್ರೀನಾಥ್​ ಬಾಟ್ನಿ ಮತ್ತಿತರರಿದ್ದರು.

ಶಕ್ತಿ ಸ್ವರೂಪಿಣಿ ಸೀತೆ

ಪ್ರತಿನಿತ್ಯ ಎಲ್ಲರೂ ರಾಮಾಯಣ ಪಾರಾಯಣ ಮಾಡಬೇಕು. ಸಮಷ್ಠಿ ತಕ್ಕಂತೆ ಬದುಕುವುದು ರಾಮಾಯಣದ ಸಂದೇಶ. ರಾಮನ ಆದರ್ಶವನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು. ಸೀತೆಯ ಆದರ್ಶವನ್ನೂ ಹೆಣ್ಣು ಮಕ್ಕಳು ಅಳವಡಿಸಿಕೊಳ್ಳಬೇಕು. ಸಿಯರ ಮನೋಬಲ ತಿಳಿದುಕೊಳ್ಳಲು ಹೆಣ್ಣು ಮಕ್ಕಳು ಈ ಗ್ರಂಥವನ್ನು ಓದಬೇಕು. ಶಕ್ತಿ ಸ್ವರೂಪಿಣಿಯಾದ ಸೀತೆ, ಭಾರತದ ಸಂಸತಿಯ ತಕ್ಕಂತೆ ಮತ್ತು ಧರ್ಮದ ಹಾದಿಯಲ್ಲಿ ಬದುಕಿದವರು ಎಂದು ಉಪನ್ಯಾಸಕಿ ಬಿ.ವಿ.ಆರತಿ ಕೌಂಡಿನ್ಯ ಕಿವಿಮಾತು ಹೇಳಿದರು.

ರಾಮಜನ್ಮಭೂಮಿ ಉಳಿಸಿಕೊಳ್ಳಲು ಏನೇ ಶಿೆ ಕೊಟ್ಟರೂ ಪಡೆಯಲು ಸಿದ್ಧವೆಂದು ಸಂಕಲ್ಪ ತೊಟ್ಟು ಹೋರಾಟಕ್ಕೆ ಧುಮುಕಿದವರು ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ. ರಾಮಮಂದಿರ ನಿರ್ಮಾಣದಲ್ಲಿ ಶ್ರೀಗಳ ಪಾತ್ರ ಪ್ರಮುಖವಾದದ್ದು. ಹಿಂದುತ್ವಕ್ಕಾಗಿ ದುಡಿದವರು. ಅಖಂಡವನ್ನು ಪ್ರೀತಿಸಿದ ಶ್ರೀಗಳು ಧರ್ಮ ಎಂಬುದು ತಾಯಿ ಇದ್ದಂತೆ ಎಂದಿದ್ದರು. ಅವರ ವ್ಯಕ್ತಿತ್ವ ಎಲ್ಲರಿಗೂ ಆದರ್ಶಮಯವಾಗಿದೆ.

| ಚಕ್ರವರ್ತಿ ಸೂಲಿಬೆಲೆ, ವಾಗ್ಮಿ