ರಂಗ ಸಂಗಮ ಕೃತಿ ಲೋಕಾರ್ಪಣೆ ಸಂದರ್ಭ ಲೇಖಕ ಗಿಳಿಯಾರು ಶ್ರೀನಿವಾಸ ಅಡಿಗ ಅವರನ್ನು ಸನ್ಮಾನಿಸಲಾಯಿತು 
ಜಿಲ್ಲೆ

ನಾಟಕ, ಜನಪದ ಕ್ಷೇತ್ರದಲ್ಲಿ ಅಪೂರ್ವ ಸಾಧನೆ : 'ರಂಗಸಂಗಮ' ಬಿಡುಗಡೆಗೊಳಿಸಿ ಶ್ರೀಧರ ಉಡುಪ ಬಣ್ಣನೆ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಕೋಟ

ರಂಗಕರ್ಮಿ ಗಿಳಿಯಾರು ಶ್ರೀನಿವಾಸ ಅಡಿಗರ ಇಪ್ಪತ್ತೈದು ನಾಟಕಗಳ 'ರಂಗಸಂಗಮ' ಅತ್ಯುತ್ತಮ ಕೃತಿ. ಈಗಾಗಲೇ ಶಾಲಾ ಕಾಲೇಜುಗಳಲ್ಲಿ ಪ್ರದರ್ಶನಗೊಂಡು ಜನಮನ್ನಣೆ ಗಳಿಸಿದೆ. ಗಿಳಿಯಾರು ಶ್ರೀನಿವಾಸ ಅಡಿಗರು ನಾಟಕ, ಜನಪದ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿದ್ದಾರೆ ಎಂದು ಚಿತ್ರ ನಿರ್ದೇಶಕ, ಲೇಖಕ ಶ್ರೀಧರ ಉಡುಪ ಹೇಳಿದರು.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಿತ್ರ ಮಂಡಳಿ ಕೋಟ, ಡಾ.ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವೇದಿಕೆ ಸಂಯುಕ್ತ ಆಶ್ರಯದಲ್ಲಿ ರಂಗಕರ್ಮಿ ಗಿಳಿಯಾರು ಶ್ರೀನಿವಾಸ ಅಡಿಗರ 25 ನಾಟಕಗಳ ಬೃಹತ್ ಕೃತಿ 'ರಂಗಸಂಗಮ' ಬಿಡುಗಡೆಗೊಳಿಸಿ ಮಾತನಾಡಿದರು.

ಪ್ರಕಾಶಕ ಸಾಧನಾ ರವಿಶಂಕರ್ ಕೃತಿ ಕುರಿತು ಮಾತನಾಡಿದರು. ಲೇಖಕ ಗಿಳಿಯಾರು ಶ್ರೀನಿವಾಸ ಅಡಿಗರು ಕೃತಿಗೆ ನೆರವು ನೀಡಿದ ಪಾರಂಪಳ್ಳಿ ನರಸಿಂಹ ಐತಾಳ, ಪ್ರೊ.ಉಪೇಂದ್ರ ಸೋಮಯಾಜಿ ಹಾಗೂ ಮಿತ್ರ ಮಂಡಳಿಯನ್ನು ಸ್ಮರಿಸಿದರು. ಬಳಿಕ ಲೇಖಕರನ್ನು ಗೌರವಿಸಲಾಯಿತು.

ಉಡುಪಿ ಜಿಲ್ಲಾ ಕಸಾಪ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು. ಮನೋಹರ ಪಿ., ಸುಬ್ರಹ್ಮಣ್ಯ ಶೆಟ್ಟಿ, ರಾಮಚಂದ್ರ ಐತಾಳ, ಪಾರಂಪಳ್ಳಿ ನರಸಿಂಹ ಐತಾಳ್, ಬೆಳಗೋಡು ರಮೇಶ್ ಭಟ್, ನರಸಿಂಹಮೂರ್ತಿ ರಾವ್ ಮಣಿಪಾಲ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮಿತ್ರ ಮಂಡಳಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರೊ.ಉಪೇಂದ್ರ ಸೋಮಯಾಜಿ ಸ್ವಾಗತಿಸಿದರು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ನರೇಂದ್ರ ಕುಮಾರ ಕೋಟ ವಂದಿಸಿದರು. ಸುಮನಾ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ನಡೆದ ಸಾಹಿತ್ಯ ಸಂವಾದದಲ್ಲಿ ಮಾನಸ, ಡಾ.ಉಮೇಶ್ ಭಟ್, ಸುಬ್ರಹ್ಮಣ್ಯ ಶೆಟ್ಟಿ, ಚೇಂಪಿ ದಿನೇಶ್ ಆಚಾರ್ಯ, ಸುಮನಾ, ಹಿರಿಯ ಲೇಖಕಿ ಲಕ್ಷ್ಮೀ ಜಿ. ಕುಚ್ಚೂರು ಭಾಗವಹಿಸಿದ್ದರು.