ಬಂಟಕಲ್ಲು ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಜೀರ್ಣೋದ್ಧಾರ ವಿಜ್ಞಾಪನಾ ಪತ್ರ ಬಿಡುಗಡೆ ನಡೆಯಿತು 
ಜಿಲ್ಲೆ

ಸಾನ್ನಿಧ್ಯದ ಪ್ರೇರಣೆಯಿಂದ ಜೀರ್ಣೋದ್ಧಾರ : ಶಶಿಧರ ವಾಗ್ಲೆ ಅಭಿಮತ ; ಜ್ಞಾಪನಾ ಪತ್ರ ಬಿಡುಗಡೆ

ಇಂದಿರಾ ಎನ್ ಕೆ

ಶಿರ್ವ: ಬಂಟಕಲ್ಲು ಪೊದಮಲೆ ಪೆರಿಯಕಲ ಶ್ರೀ ಬಬ್ಬುಸ್ವಾಮಿ ಕ್ಷೇತ್ರವನ್ನು ಸಂಪೂರ್ಣ ಜೀರ್ಣೋದ್ಧಾರಗೊಳಿಸುವ ನಿಟ್ಟಿನಲ್ಲಿ ಗುರಿಕಾರರು, ಹತ್ತು ಸಮಸ್ತರು, ಪರಿಸರದ ಗಣ್ಯರನ್ನು ಒಳಗೊಂಡ ಜೀಣೋದ್ಧಾರ ಸಮಿತಿ ಕ್ರಿಯಾಶೀಲರಾಗಿದ್ದು ಗುರುವಾರ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಲಾಯಿತು.
ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ ಮಾತನಾಡಿ, ಯಾವುದೇ ಸಾನ್ನಿಧ್ಯಗಳ ಜೀರ್ಣೋದ್ಧಾರ ಕಾರ್ಯ ಆ ಸಾನ್ನಿಧ್ಯದ ಪ್ರೇರಣೆಯಿಂದಲೇ ನಡೆಯುತ್ತವೆ ಎಂದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಭಾಸ್ಕರ ಶೆಟ್ಟಿ ಸಡಂಬೈಲು, ಗುರಿಕಾರ ಶಂಕರ ಪದಕಣ್ಣಾಯ, ಶಿರ್ವ ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ಪಾಟ್ಕರ್, ಸಮಿತಿ ಉಪಾಧ್ಯಕ್ಷ ಬಿ.ಪುಂಡಲೀಕ ಮರಾಠೆ, ಸಮಿತಿ ಉಪಾಧ್ಯಕ್ಷ ಮಂಜುನಾಥ್ ಪಾಟ್ಕರ್ ಬಂಟಕಲ್ಲು, ಶಿರ್ವ ಬಂಟರ ಸಂಘ ಅಧ್ಯಕ್ಷ ವೀರೇಂದ್ರ ಶೆಟ್ಟಿ ಪಂಜಿಮಾರು, ವಿಶ್ವನಾಥ್ ಶೆಟ್ಟಿ ಪಂಜಿಮಾರು ದೊಡ್ಡಮನೆ, ಕೋಶಾಧಿಕಾರಿ ಸಂಜೀವ ವೈ, ಸದಾನಂದ ಎಸ್., ದೈವಸ್ಥಾನ ಅರ್ಚಕ ಸಂತೋಷ್ ಆರ್., ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಕ್ಷೇತ್ರದ ಗುರಿಕಾರ ಶಂಕರ ಪದಕಣ್ಣಾಯ ಸ್ವಾಗತಿಸಿದರು. ದಿನೇಶ್ ಎಸ್.ಕೆ.ಪ್ರಾರ್ಥಿಸಿ, ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಪ್ರಸಾದ್ ನಿರೂಪಿಸಿದರು. ಸುಜಿತ್ ಕುಮಾರ್ ವಂದಿಸಿದರು.
ದೇಣಿಗೆ ಹಸ್ತಾಂತರ
ಬಂಟಕಲ್ಲು ಪೇಟೆಯಲ್ಲಿರುವ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಕಾರ್ಯಾಲಯದಲ್ಲಿ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಲಾಯಿತು. ಮೆಸ್ಕಾಂ ಹಿರಿಯ ತಂತ್ರಜ್ಞರಾಗಿ ಕರ್ತವ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದಿದ ಕೆ.ವಿಶ್ವನಾಥ್ ಅರಸೀಕಟ್ಟೆ ಅವರನ್ನು ದೈವಸ್ಥಾನ ಆಡಳಿತ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಕ್ಕೆ ಆರಂಭಿಕ ದೇಣಿಗೆಯಾಗಿ ಒಂದು ಲಕ್ಷ ರೂ. ಚೆಕ್‌ನ್ನು ಹಸ್ತಾಂತರಿಸಿದರು.