ವಿಜಯಪುರದ ಚಾಣಕ್ಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪ್ರೊ. ಶಂಭು ಮೇರವಾಡೆ ರಚಿಸಿದ ಗಾಳಿಪಟ ಲಘುಕಥಾ ಸಂಕಲನ ಬಿಡುಗಡೆಗೊಳಿಸಲಾಯಿತು. ಡಾ. ಯು.ಎಸ್. ಪೂಜೇರಿ, ಜಿ.ಆರ್. ಅಂಬಲಿ, ಎಸ್.ಟಿ. ಮೇರವಾಡೆ ಮತ್ತಿತರರಿದ್ದಾರೆ. 
ಜಿಲ್ಲೆ

ಗಾಳಿಪಟ ಲಘುಕಥಾ ಸಂಕಲನ ಬಿಡುಗಡೆ

ಗಿರೀಶ ಸಗರ

ವಿಜಯಪುರ : ನಗರದ ಚಾಣಕ್ಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಗುರುವಾರ ಪ್ರೊ. ಶಂಭು ಮೇರವಾಡೆ ರಚಿಸಿದ ಗಾಳಿಪಟ ಲಘು ಕಥಾ ಸಂಕಲನ ಬಿಡುಗಡೆಗೊಳಿಸಲಾಯಿತು.

ನಿವೃತ್ತ ಪ್ರಾಚಾರ್ಯ ಡಾ. ಯು.ಎಸ್. ಪೂಜೇರಿ ಪುಸ್ತಕ ಬಿಡುಗಡೆಗೊಳಿಸಿ, ಈ ಕಥಾಸಂಕಲನ ಎಲ್ಲ ಸಹೃದಯರು ಓದುವಂತಹ ಸಾಮಾಜಿಕ ಕಳಕಳಿಯ ಹಾಗೂ ನೈಜ ಘಟನೆಗಳನ್ನು ಆಧರಿಸಿ ಬರೆದಂತಹುದಾಗಿದೆ. ಸಾಧನೆ ಸಾಧಕನ ಸೊತ್ತು ಹೊರತು ಸೋಮಾರಿಯ ಸೊತ್ತಲ್ಲ ಎಂಬುದನ್ನು ಪ್ರೊ. ಶಂಭು ನಿರೂಪಿಸಿದ್ದಾರೆಂದರು.

ಉಪ ಪ್ರಾಚಾರ್ಯ ಜಿ.ಆರ್. ಅಂಬಲಿ ಮಾತನಾಡಿದರು. ಪ್ರಾಚಾರ್ಯ ಎಸ್.ಟಿ. ಮೇರವಾಡೆ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಬಿ.ಎ. ಕುಲಕರ್ಣಿ, ಪ್ರೊ. ಜಿ.ಎಸ್. ಬಗಲಿ, ಎಂ.ಟಿ. ಶೇಲಾರ ಮತ್ತಿತರರಿದ್ದರು.

ಅಂಜುಮನ್ ಮಹಾವಿದ್ಯಾಲಯದ ಹಿಂದಿ ಪ್ರಾಧ್ಯಾಪಕ ಪ್ರೊ. ಎ.ಎಂ. ಸಿದ್ದಕಿ ಪ್ರಾರ್ಥಿಸಿದರು. ಪ್ರೊ.ಬಿ.ವಿ. ಹಿರೇಮಠ ಸ್ವಾಗತಿಸಿ ಪರಿಚಯಿಸಿದರು. ಪ್ರೊ.ಎನ್.ಎಸ್. ಹರನಾಳ ನಿರೂಪಿಸಿದರು. ಪ್ರೊ.ಆರ್.ಬಿ. ಕಟ್ಟಿಮನಿ ವಂದಿಸಿದರು.