ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎ.ಎಸ್.ಪಾವಟೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಂಗಮೇಶ ಎಂ.ಹಿರೇಮಠ, ಬಸವರಾಜ ಮುಕ್ಕುಪ್ಪಿ, ಡಾ.ಚಂದ್ರಶೇಖರ ಕಾಳನ್ನವರ, ಎಸ್.ಎಚ್.ಶೆಟ್ಟರ, ಲಕ್ಷ್ಮೀ ಭದ್ರಶೆಟ್ಟಿ ಉಪಸ್ಥಿತರಿದ್ದರು. 
ಜಿಲ್ಲೆ

29ರಂದು ಭಾವ, ಭಾವದೆಳೆ ಗ್ರಂಥ ಬಿಡುಗಡೆ

ಬಾಗಲಕೋಟೆ : ನಿರವ ಯಲಪಥಿಕ ಎಚ್.ಜಿ.ಮೃತ್ಯುಂಜಯ ಸ್ಮಾರಕ ಪ್ರತಿಷ್ಠಾನ, ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಸಹಯೋಗದಲ್ಲಿ ಜು.29 ರಂದು ಚರಂತಿಮಠದಲ್ಲಿ ಮೃತ್ಯುಂಜಯ ; ಭಾವ, ಭಾವದೆಳೆ-ಗ್ರಂಥ ಬಿಡುಗಡೆ ಮತ್ತು ನಿರವ ಯಲಪಥಿಕ ಎಚ್.ಜಿ.ಮೃತ್ಯುಂಜಯ ಪ್ರಶಸ್ತಿ ಪ್ರದಾನ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎ.ಎಸ್.ಪಾವಟೆ ಹೇಳಿದರು.

ಅಂದು ಬೆಳಗ್ಗೆ 10.30 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಚರಂತಿಮಠದ ಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಯರನಾಳ ಉಕ್ಕಲಿ ಮಠದ ಗುರುಸಂಗನಬಸವ ಸ್ವಾಮೀಜಿ ನೇತೃತ್ವ ವಹಿಸುವರು. ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಗ್ರಂಥ ಬಿಡುಗಡೆ ಮಾಡುವರು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಿರವಯಲ ಪಥಿಕ ಎಚ್.ಜಿ.ಮೃತ್ಯುಂಜಯ ಸ್ಮಾರಕ ಪ್ರತಿಷ್ಠಾನ ಕೊಡ ಮಾಡುವ ಅಧ್ಯಾತ್ಮ ಸಾಹಿತ್ಯ ದೀಪಕ ಪ್ರಶಸ್ತಿಯನ್ನು ಶಿಕ್ಷಣ, ಸಂಸ್ಕೃತಿ, ಅಧ್ಯಾತ್ಮ ಚಿಂತಕರಾದ ಡಾ.ಗುರುರಾಜ ಕರಜಗಿ ಅವರಿಗೆ ನೀಡಲಾಗುವುದು. ಶರಣ ಸಾಹಿತ್ಯ ದೀಪಕ ಪ್ರಶಸ್ತಿಯನ್ನು ಶರಣ ಸಾಹಿತ್ಯ, ಸಂಸ್ಕೃತಿ-ಕಲೆ, ಹಿರಿಯ ವಿದ್ವಾಂಸ ಡಾ.ಬಿ.ಕೆ ಹಿರೇಮಠ ಅವರಿಗೆ ಕೊಡ ಮಾಡಲಾಗುವುದು ಎಂದು ಹೇಳಿದರು.

ನಿರವ ಯಲಪಥಿಕ ಎಸ್.ಜಿ.ಮೃತ್ಯುಂಜಯ ಸ್ಮಾರಕ ಪತ್ರಿಷ್ಠಾನದ ಗುರು ಸಂಗಮೇಶ ಎಂ.ಹಿರೇಮಠ, ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವರಾಜ ಬಿ.ಮುಕ್ಕುಪ್ಪಿ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ, ಕದಳಿ ಮಹಿಳಾ ವೇದಿಕೆ ಜಿಲ್ಲಾಧ್ಯಕ್ಷೆ ಎಸ್.ಎಚ್.ಶೆಟ್ಟರ, ಕಾರ್ಯದರ್ಶಿ ವಿಜಯ ಲಕ್ಷ್ಮೀ ಭದ್ರಶೆಟ್ಟಿ ಉಪಸ್ಥಿತರಿದ್ದರು.