ಜಿಲ್ಲೆ

ಅಮಾಯಕರಿಗೆ ತೊಂದರೆ ಕೊಡ್ಬೇಡಿ..; ಹುಬ್ಬಳ್ಳಿ ಗಲಭೆ ವಿಚಾರದಲ್ಲಿ ಡಿ.ಕೆ. ಶಿವಕುಮಾರ್ ಹೇಳಿಕೆ

Webdesk - Ravikanth

ಹುಬ್ಬಳ್ಳಿ: ವಿವಾದಕ್ಕೆ ಆಸ್ಪದ ಮಾಡಿಕೊಡುವಂಥ ಎಡಿಟೆಡ್ ವಿಡಿಯೋವೊಂದನ್ನು ವಾಟ್ಸ್​ಆ್ಯಪ್​ ಸ್ಟೇಟಸ್​​ಗೆ ಹಾಕಿಕೊಂಡಿದ್ದಕ್ಕೆ ಹುಬ್ಬಳ್ಳಿ ಗಲಭೆ ಎಬ್ಬಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಅಮಾಯಕರಿಗೆ ತೊಂದರೆ ಕೊಡಬೇಡಿ ಎಂಬ ಹೇಳಿಕೆಯೊಂದನ್ನು ನೀಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ನಿನ್ನೆಯಷ್ಟೇ ಅಮಾಯಕರಿಗೆ ತೊಂದರೆ ಕೊಡಬೇಡಿ ಎಂದು ಹೇಳಿದ್ದು, ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ಅದೇ ಹೇಳಿಕೆ ನೀಡಿದ್ದಾರೆ. ಇಂದು ಹುಬ್ಬಳ್ಳಿಗೆ ಭೇಟಿ ಮಾಡಿದ ಡಿಕೆಶಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಪೊಲೀಸರು ಗಲಭೆಯನ್ನು ವೇಗವಾಗಿ ನಿಯಂತ್ರಣ ಮಾಡಿದ್ದಾರೆ. ಯಾರು ಕಾನೂನು ಕೈಗೆತ್ತಿಕೊಂಡಿದ್ದಾರೆ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡಿದ್ದಾರೆ. ನಾವು ಯಾರೂ ಅದಕ್ಕೆ ಅಡ್ಡಪಡಿಸುವುದಿಲ್ಲ. ಪೊಲೀಸರ ಕೆಲಸಕ್ಕೆ ಅಡ್ಡಿಪಡಿಸಬಾರದು. ತೊಂದರೆ ಕೊಟ್ಟವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು. ಆದರೆ ಪ್ರಾರ್ಥನೆ ಮಾಡುತ್ತಿದ್ದ, ಘಟನೆ ನೋಡುತ್ತಿದ್ದ ಅಮಾಯಕರ ಮೇಲೆ ಕೇಸ್ ಹಾಕುವುದು ಸರಿಯಲ್ಲ, ಅಂಥವರ ಮೇಲೆ ಸುಳ್ಳು ಕೇಸ್ ಹಾಕಬಾರದು, ಅಮಾಯಕರಿಗೆ ತೊಂದರೆ ಕೊಡುವುದನ್ನು ನಿಲ್ಲಿಸಬೇಕು ಎಂದು ಡಿಕೆಶಿ ಹೇಳಿದ್ದಾರೆ.