ದೇವದುರ್ಗ ತಾಲೂಕು ಗಬ್ಬೂರು ಶ್ರೀ ಬಿಬ್ಬಿ ಬಾಚರಸ ಕರ್ತೃ ಗದ್ದುಗೆ ಆವರಣದಲ್ಲಿ ಶರಣರಿಗೊಂದು ಸಸಿ ಕಾರ್ಯಕ್ರಮದ ಅಂಗವಾಗಿ ಯುವ ಬ್ರಿಗೇಡ್ ಮುಖಂಡರು ಸಸಿ ನೆಟ್ಟರು. ಸಂಚಾಲಕರಾದ ಚೆನ್ನು ಚಿಕ್ಕಮಠ, ಎಚ್.ರಾಚನಗೌಡ, ಗುರುಬಸವ, ಎಚ್.ಸುರೇಶ್, ಶಿವುಕುಮಾರ್ ಹೊಂಬೆಳಕು, ವೀರೇಶ ಯಾದವ್, ದೇವರಾಜ್, ನಾಗರಾಜಗೌಡ, ಬೂದೆಪ್ಪಗೌಡ, ಚನ್ನು ಸಾಹುಕಾರ್, ಮಲ್ಲು ಹಿರೇಮಠ ಇದ್ದರು. 
ಜಿಲ್ಲೆ

ಶರಣರಿಗೊಂದು ಸಸಿ ಕಾರ್ಯಕ್ರಮ

Kopala - Desk - Eraveni

ದೇವದುರ್ಗ: ತಾಲೂಕಿನ ಗಬ್ಬೂರು ಗ್ರಾಮದ ಶ್ರೀ ಶರಣ ಬಿಬ್ಬಿ ಬಾಚರಸ ಕರ್ತೃ ಗದ್ದುಗೆ ಆವರಣದಲ್ಲಿ ಯುವ ಬ್ರಿಗೇಡ್ ಸಂಘಟನೆಯಿಂದ 192ನೇ ವಾರದ ಶ್ರಮದಾನ ಅಂಗವಾಗಿ ಭಾನುವಾರ ಶರಣರಿಗೊಂದು ಸಸಿ ನೆಡುವ ಅಭಿಯಾನ ಕೈಗೊಳ್ಳಲಾಗಿತ್ತು.

ಸಂಘಟನೆ ಜಿಲ್ಲಾ ಸಂಚಾಲಕ ಚೆನ್ನು ಚಿಕ್ಕಮಠ ಮಾತನಾಡಿ, ಸಂಘಟನೆಯಿಂದ ಸ್ವಚ್ಛತಾ ಅಭಿಯಾನ, ಶ್ರಮದಾನ ಕೈಗೊಳ್ಳುತ್ತಿದ್ದು, ಈಗಾಗಲೇ 191ನೇ ವಾರದ ಶ್ರಮದಾನ ಮಾಡಲಾಗಿದೆ. ಸಾರ್ವಜನಿಕ ಬಸ್ ನಿಲ್ದಾಣ, ಶಾಲಾ, ಕಾಲೇಜು ಆವರಣ, ದೇವಸ್ಥಾನ ಸೇರಿ ವಿವಿಧೆಡೆ ಪ್ರತಿ ಭಾನುವಾರ ಸ್ವಚ್ಛತೆ ಕೈಗೊಳ್ಳಲಾಗಿದೆ. 192ನೇ ವಾರದ ಶ್ರಮದಾನವನ್ನು ಶರಣರಿಗೊಂದು ಸಸಿ ನೆಡುವ ಎನ್ನುವ ವಿಭಿನ್ನ ಕಾರ್ಯಕ್ರಮ ರೂಪಿಸಲಾಗಿದೆ.

ಸಮಾಜ ಸೇವಕರಾದ ಗಿರಿಸ್ವಾಮಿ ಸಿಂಧನೂರು, ಬಿ.ಪಿ.ಯಾದವ್, ದೇವರಾಜ ಸುಲ್ತಾನಪುರ, ಚನ್ನಪ್ಪ ಬೂದಿನಾಳ ಸಹಕಾರದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶರಣ ಬಿಬ್ಬಿ ಬಾಚರಸರ ಕರ್ತೃ ಗದ್ದುಗೆಯಲ್ಲಿ ನೂರಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು. ಅವುಗಳಿಗೆ ಶರಣರ ಭಾವಚಿತ್ರ ಹಾಕಿ, ಅವರ ಹೆಸರು ನಾಮಕರಣ ಮಾಡಲಾಯಿತು. ಶ್ರಮದಾನ ಕಾರ್ಯಕ್ರಮಕ್ಕೆ ಯುವಜನರು ಕೈಜೋಡಿಸಿ ಸ್ವಚ್ಛ ಪರಿಸರ ನಿರ್ಮಿಸಲು ಶ್ರಮಿಸಬೇಕು ಎಂದರು.

ಸಂಚಾಲಕರಾದ ಎಚ್.ರಾಚನಗೌಡ, ಗುರುಬಸವ, ಎಚ್.ಸುರೇಶ್, ಶಿವುಕುಮಾರ್ ಹೊಂಬೆಳಕು, ವೀರೇಶ ಯಾದವ್, ದೇವರಾಜ್, ನಾಗರಾಜಗೌಡ, ಬೂದೆಪ್ಪಗೌಡ, ಚನ್ನು ಸಾಹುಕಾರ್, ಮಲ್ಲು ಹಿರೇಮಠ, ಹುಸೇನ್, ಕುಮಾರ್, ಶಿವಾನಂದ, ಮಹಾಂತೇಶ್ ಇತರರಿದ್ದರು.