ಜಿಲ್ಲೆ

ಶಿಕ್ಷಕರಿಗೆ ಪುನಶ್ಚೇತನ ತರಬೇತಿ ಕಾರ್ಯಾಗಾರ

ಇಂದಿರಾ ಎನ್ ಕೆ

ಕೋಟ: ತುಳಸಿ ಎಜುಕೇಶನ್ ಟ್ರಸ್ಟ್ ವತಿಯಿಂದ ಹಳ್ನಾಡಿನ ತುಳಸಿ ವಿದ್ಯಾ ಮಂದಿರ ಆಂಗ್ಲ ವಾಧ್ಯಮ ಶಾಲೆಯಲ್ಲಿ ಶಿಕ್ಷಕರಿಗೆ ಮೂರು ದಿನಗಳ ಪುನಶ್ಚೇತನ ತರಬೇತಿ ಕಾರ್ಯಾಗಾರ ಇತ್ತೀಚಿಗೆ ನಡೆಯಿತು.

ಬೇಳೂರಿನ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಪ್ರದೀಪ್ ಸಾಮಗ ಕಾರ್ಯಾಗಾರ ಉದ್ಘಾಟಿಸಿದರು. ತುಳಸಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಕೃಷ್ಣರಾಯ ಶಾನುಬಾಗ್ ಅಧ್ಯಕ್ಷತೆ ವಹಿಸಿದ್ದರು.

ಉದಯ ಗಾಂವ್ಕರ್, ನಾರಾಯಣ ಶೆಟ್ಟಿ ಸಳ್ವಾಡಿ ಹಾಗೂ ವಾಧವ ಅಡಿಗ ಭಾರತೀಯ ಕಾಲವಾನ ಪದ್ಧತಿ ಬಗ್ಗೆ ವಾಹಿತಿ ನೀಡಿದರು. ಮಧ್ಯಾಹ್ನದ ಬಳಿಕ ಹಾಡು, ನೃತ್ಯ, ಕತೆ, ವಿವಿಧ ಆಟೋಟಗಳು ಹಾಗೂ ವಿಜ್ಞಾನ ಪ್ರಯೋಗದಂತಹ ವಿಶೇಷ ತರಗತಿ ನಡೆಸಲಾಯಿತು.

ಸವಾರೋಪದಲ್ಲಿ ತುಳಸಿ ಸಂಸ್ಥೆ ಅಧ್ಯಕ್ಷ ಕೃಷ್ಣರಾಯ ಶಾನುಭಾಗ್ ಹಾಗೂ ಗಣೇಶ್ ಆರ್.ಎಂ., ಮುಖ್ಯ ಶಿಕ್ಷಕಿ ರೇಷ್ಮಾ ಪ್ರದೀಪ್ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಕುವಾರಿ ದಿವ್ಯಾ, ಆಶ್ರಿತಾ, ಸುಪ್ರಿಯಾ ಅನಿಸಿಕೆ ಹಂಚಿಕೊಂಡರು. ಶಾಂತಿಧಾಮ ಗುರುಕುಲದ ಮುಖ್ಯಶಿಕ್ಷಕ ಅನಂತ್ ನಾಯ್ಕ ಸ್ವಾಗತಿಸಿದರು. ತುಳಸಿ ವಿದ್ಯಾ ಮಂದಿರದ ಮುಖ್ಯಶಿಕ್ಷಕಿ ರೇಷ್ಮಾ ಪ್ರದೀಪ್ ವಂದಿಸಿದರು.