ಕಾಸರಗೋಡು: ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗ ಇಲಾಖೆ ಅಧೀನದಲ್ಲಿ ಮಾನ್ಯತೆ ಪಡೆದ ಇಂಜಿನಿಯರ್, ಮೇಲ್ವಿಚಾರಕ ಹುದ್ದೆಗಳಿಗೆ ಅರ್ಹರಾದ ಪರಿಶಿಷ್ಟ ವರ್ಗ ವಿಭಾಗಕ್ಕೆ ಸೇರಿದ ಯುವಕ ಯುವತಿಯರಿಂದ ಒಂದು ಖಾಲಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳು ಸಂಪೂರ್ಣವಾಗಿ ತರಬೇತಿ ನೀಡುವ ಯೋಜನೆಯಾಗಿದೆ. ಅರ್ಜಿ ಸಲ್ಲಿಸಲು ಆ.19ರಂದು ಸಂಜೆ 5ಕ್ಕೆ ಕೊನೆ ದಿನಾಂಕವಾಗಿದೆ. ಅರ್ಜಿ ಮಾದರಿ ಟ್ರೈಬಲ್ ಎಕ್ಸ್ ಟೆನ್ಶನ್ ಆಫೀಸ್ ಪನತ್ತಡಿ, ಭೀಮನಡಿ ಎಂಬೆಡೆಗಳಲ್ಲಿ ಹಾಗೂ www.stdd.kerala.gov.in ಎಂಬ ವೆಬ್ ಸೈಟ್ ಮೂಲಕವೂ ಲಭಿಸುವುದು. ದೂರವಾಣಿ ಸಂಖ್ಯೆ- 0467 2960111.