Real Estate Expo : ಗ್ರಾಹಕರು ಹಾಗೂ ರಿಯಾಲ್ಟಿ ಕಂಪನಿಗಳ ನಡುವೆ ಸೇತುವೆಯಾಗಿ ರಾಜ್ಯದ ನಂ.1 ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ ವಿಜಯನಗರದ ಟೆಲಿಫೋನ್ ಎಕ್ಸ್ಚೇಂಜ್ ಕಚೇರಿ ಹತ್ತಿರವಿರುವ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಶನಿವಾರ (ನ.30) ಮತ್ತು ಭಾನುವಾರ (ಡಿ.01) “ರಿಯಲ್ಎಸ್ಟೇಟ್ ಎಕ್ಸ್ಪೋ” ಆಯೋಜಿಸಿದೆ.
ಅಶ್ವಸೂರ್ಯ ರಿಯಾಲಿಟಿಸ್ ಅರ್ಪಿಸುವ ಈ ಎಕ್ಸ್ಪೋದಲ್ಲಿ ರಾಜ್ಯದ ಪ್ರಮುಖ ರಿಯಾಲ್ಟಿ ಕಂಪನಿಗಳಾದ ಶರಣ್ಯ ಫಾರ್ಮ್ಸ್, ಡಿಎಸ್ ಮ್ಯಾಕ್ಸ್, ಸಪ್ತಗಿರಿ ಪ್ರಮೋಟರ್ಸ್ ಹಾಗೂ ಗುರು ಪುನ್ವಾನಿ ಸೇರಿದಂತೆ ವಿವಿಧ ರಿಯಾಲ್ಟಿ ಕಂಪನಿಗಳು ಭಾಗವಹಿಸಿ ನಿವೇಶನ, ಅಪಾರ್ಟ್ಮೆಂಟ್ ಹಾಗೂ ವಿಲ್ಲಾಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಲಿವೆ. ಪೀಠೋಪಕರಣ ಉದ್ಯಮ, ಕಬ್ಬಿಣ ಹಾಗೂ ಸಿಮೆಂಟ್ ಕಂಪನಿಗಳು, ಮನೆಯ ಹೊರಾಂಗಣ ಹಾಗೂ ಒಳಾಂಗಣ ವಿನ್ಯಾಸ ತಜ್ಞರು, ಕಟ್ಟಡ ಸಾಮಗ್ರಿ ವಿತರಕರು ಕೂಡ ಪಾಲ್ಗೊಳ್ಳಲಿದ್ದಾರೆ.
ಕನಸು ನನಸಾಗಿಸಿಕೊಳ್ಳಿ: ಜೀವನದಲ್ಲಿ ಸ್ವಂತ ಮನೆ ಹೊಂದಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ. ಕೋವಿಡ್ ಬಳಿಕ ಮನೆಯ ಮಹತ್ವ ಬಗ್ಗೆ ಜನರಿಗೆ ಹೆಚ್ಚಿನ ಅರಿವು ಆಗಿದೆ. ಈ ಹಿನ್ನೆಲೆಯಲ್ಲಿ ಸಿಲಿಕಾನ್ಸಿಟಿ ಸುತ್ತಮುತ್ತ ಕೈಗೆಟಕುವ ದರದಲ್ಲಿ ನಿವೇಶನ, ವಿಲ್ಲಾ, ಫ್ಲ್ಯಾಟ್ ಹಾಗೂ ಫಾರ್ಮ್ಹೌಸ್ಗಳನ್ನು ಖರೀದಿಸಿ ತಮ್ಮ ಕನಸುಗಳನ್ನು ನನಸಾಗಿಸುವ ಸುವರ್ಣಾವಕಾಶ ಇದಾಗಿದೆ. ಬಿಡಿಎ ಹಾಗೂ ಬಿಎಂಆರ್ಡಿಎ ಸೈಟ್ಗಳು ಲಭ್ಯವಿದೆ. ಆಕರ್ಷಕ ಕೊಡುಗೆಗಳು ಸಿಗಲಿವೆ. ಸಾರ್ವಜನಿಕರು ಇಂತಹ ಒಳ್ಳೆಯ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು.
ಸ್ಟಾಲ್ ಬುಕಿಂಗ್ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪ್ರತೀಕ್ಷಾ-7204281477