ಜಿಲ್ಲೆ

ಬಡವರ ಆರ್ಥಿಕ ಶಕ್ತಿಯಾಗಲಿ ಬ್ಯಾಂಕ್ : ಮನೋಹರ ಕೋಟ್ಯಾನ್ ಪ್ರತಿಪಾದನೆ

ಸೌಮ್ಯ ಆರ್

ಮೂಲ್ಕಿ: ಗ್ರಾಮೀಣ ಬಡ ವರ್ಗದ ಆರ್ಥಿಕ ಉನ್ನತಿಯ ಶಕ್ತಿಯಾಗಿ ಕೃಷಿ, ಶೈಕ್ಷಣಿಕ ಸಹಕಾರಿಯಾಗಿ ಬ್ಯಾಂಕ್ ನಿಂತಾಗ ಜನಸ್ನೇಹಿಯಾಗಲು ಸಾಧ್ಯವಿದ್ದು ಸಾರ್ವಜನಿಕರು ಬ್ಯಾಂಕ್ ನೀಡುವ ಸವಲತ್ತುಗಳನ್ನು ಪಡೆಯಬೇಕು ಎಂದು ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮನೋಹರ ಕೋಟ್ಯಾನ್ ಹೇಳಿದರು.

ಅತಿಕಾರಿಬೆಟ್ಟು ಗ್ರಾಮದಲ್ಲಿ ಬ್ಯಾಂಕ್ ಆಫ್ ಬರೋಡ ಮೂಲ್ಕಿ ಶಾಖೆ ವತಿಯಿಂದ ಮರು ಕೆವೈಸಿ ಮತ್ತು ನಾಮನಿರ್ದೇಶನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಆರ್‌ಬಿಐ ಜನರಲ್ ಮ್ಯಾನೇಜರ್ ಜಯಪ್ರಕಾಶ್ ಮರು ಕೆವೈಸಿ ಮತ್ತು ನಾಮನಿರ್ದೇಶನ ಕಾರ್ಯಕ್ರಮದ ಮಹತ್ವ ಮತ್ತು ಜನಸುರಕ್ಷಾ ಯೋಜನೆಗಳ ವ್ಯಾಪ್ತಿ ವಿವರಿಸಿದರು.

ಅತಿಕಾರಿಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬ್ಯಾಂಕ್ ಆಫ್ ಬರೋಡಾ ಮಂಗಳೂರು ನಗರ ಪ್ರದೇಶದ ಪ್ರಾದೇಶಿಕ ವ್ಯವಸ್ಥಾಪಕ ಸಿ.ವಿ.ಎಸ್.ಚಂದ್ರಶೇಖರ್, ಆರ್‌ಬಿಐ ಎಜಿಎಂ ಅರುಣ್, ಕರ್ನಾಟಕ ಬ್ಯಾಂಕ್‌ನ ಎಫ್‌ಐ ಸೆಲ್‌ನ ಡಿಜಿಎಂ ವಿನಯ್ ಕುಲಕರ್ಣಿ, ಕೆನರಾ ಬ್ಯಾಂಕ್‌ನ ಡಿಜಿಎಂ ಶೈಲೇಂದ್ರ ಶೇಟ್ ಮತ್ತು ಲೀಡ್ ಬ್ಯಾಂಕ್ ಮ್ಯಾನೇಜರ್ ಕವಿತಾ ಎನ್.ಶೆಟ್ಟಿ ಉಪಸ್ಥಿತರಿದ್ದರು.

ಬ್ಯಾಂಕ್ ಆಫ್ ಬರೋಡಾದ ಮೂಲ್ಕಿ ಶಾಖಾ ವ್ಯವಸ್ಥಾಪಕ ಸಚಿನ್ ಹೆಗ್ಡೆ ಸ್ವಾಗತಿಸಿದರು. ಲತೇಶ್ ನಿರೂಪಿಸಿದರು. ಬ್ಯಾಂಕ್‌ನ ಹಣಕಾಸು ಸೇರ್ಪಡೆ ವಿಭಾಗದ ಪ್ರಬಂಧಕ ಪ್ರಜ್ವಲ್ ಕುಮಾರ್ ವಂದಿಸಿದರು.