ಬಸವರಾಜ್ ಆಯ್ಕೆ  
ಜಿಲ್ಲೆ

ಅಧ್ಯಕ್ಷರಾಗಿ ಡಾ.ಬವಸವರಾಜ್ ಪುನರಾಯ್ಕೆ

ಕೋಟ: ಅಖಿಲ ಭಾರತ ಪದ್ಮಬ್ರಾಹ್ಮಣ ಪುರೋಹಿತ ಸಂಘ, ಕರ್ನಾಟಕ ರಾಜ್ಯದ ಪದ್ಮಬ್ರಾಹ್ಮಣ ಪುರೋಹಿತ ಸಂಘದ ರಾಜ್ಯಾಧ್ಯಕ್ಷರಾಗಿ ವಾಸ್ತುತಜ್ಞ, ಜ್ಯೋತಿಷಿ ಡಾ.ಬಸವರಾಜ್ ಶೆಟ್ಟಿಗಾರ್ ಕೋಟೇಶ್ವರ ಅವರನ್ನು 3 ವರ್ಷಗಳ ಅವಧಿಗೆ ಅಖಿಲ ಭಾರತ ಪದ್ಮಬ್ರಾಹ್ಮಣ ಪುರೋಹಿತ ಸಂಘದ ಅಧ್ಯಕ್ಷ ಬೋಜ್ಜನ್ನ ಪಂತುಲು ಆಯ್ಕೆ ಮಾಡಿದ್ದಾರೆ. ಪ್ರಧಾನ ಕಾರ್ಯದರ್ಶಿ ಆಡೆಪು ಹರೀಶ್, ಪುಂಡಲೀಕಾನಂದ ತಾಟಿಪಾಮುಲು ಪಂತುಲು, ಕರ್ನಾಟಕದ ದತ್ತಾತ್ರೇಯ ಮಠದ ಆಸ್ತಾನ ವಿದ್ವಾಂಸರಾದ ಕೇಶವ ಮೂರ್ತಿ ಭಾರ್ಗಾವಾಚಾರ್ಯ, ಕೋಶಾಧಿಕಾರಿ ಹೈದರಬಾದ್ ತೆಲಂಗಾಣದ ರಮೇಶ್ ಋಷಿ ಉಪಸ್ಥಿತರಿದ್ದರು.