ಜಿಲ್ಲೆ

ಆದಿಸುಬ್ರಹ್ಮಣ್ಯ ದೇವಳ ಪುನಃ ಪ್ರತಿಷ್ಠಾಪನೆ

ಇಂದಿರಾ ಎನ್ ಕೆ

ಕೊಕ್ಕರ್ಣೆ: ಶ್ರೀ ಕ್ಷೇತ್ರ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮಂದಾರ್ತಿ ಶ್ರೀ ಆದಿಸುಬ್ರಹ್ಮಣ್ಯ ದೇವಸ್ಥಾನದ ಪುನಃ ಪ್ರತಿಷ್ಠಾಪನಾ ಮಹೋತ್ಸವ ಜ.31ರಂದು ಪ್ರಾರಂಭಗೊಂಡು ಫೆ.3ರ ಪರ್ಯಂತ ಜರುಗಲಿದೆ.

ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಸಂಬಂಧಪಟ್ಟ ಶ್ರೀ ಆದಿಸುಬ್ರಹ್ಮಣ್ಯ ದೇವರ ನೂತನ ಶಿಲಾಮಯ ದೇವಸ್ಥಾನವನ್ನು ಸುಬ್ರಹ್ಮಣ್ಯ ಮಂಜರ ಸವಿನೆನಪಿಗಾಗಿ ದಾನಿಗಳಾದ ವಿಶಾಲಾಕ್ಷಿ ಮತ್ತು ಮಕ್ಕಳು ಮಾರಣಕಟ್ಟೆ ಜೀರ್ಣೋದ್ಧಾರಗೊಳಿಸಿ ಪುನಃ ಪ್ರತಿಷ್ಠಾಪನೆಗೊಳಿಸಿ ಲೋಕಾರ್ಪಣೆಗೊಳಿಸಲಿದ್ದಾರೆ. ಶ್ರೀದೇವಳದ ವತಿಯಿಂದ ಕೃಷ್ಣಮೂರ್ತಿ ಮಂಜ ಅವರಿಗೆ ಗೌರವಾರ್ಪಣೆ.

ಜ.31ರಂದು ಬೆಳಗ್ಗೆ ವಾರ್ಷಿಕೋತ್ಸವ ಅಂಗವಾಗಿ ಶ್ರೀ ದೇವಿಗೆ ಬ್ರಹ್ಮಕಲಶಾಭಿಷೇಕ, ಪ್ರಧಾನ ಹೋಮ, ಚಂಡಿಕಾಯಾಗ, ಫೆ.1ಕ್ಕೆ ಶ್ರೀ ದೇವತಾ ಪ್ರಾರ್ಥನೆ, ಪುಣ್ಯಾಹ ವಾಚನ, ಮಾತ್ರಕಾಪೂಜನಾ ಋತ್ವಿಗ್ವರಣ, ಮಧುಪರ್ಕ ಪೂಜಾ, ಕೌತುಕ ಬಂಧನ, ಗಣಪತಿಯಾಗ, ನವಗ್ರಹಯಾಗ, ಸಂಜೆ ಪ್ರಸಾದ ಪರಿಗ್ರಹ, ಸ್ಥಾನ ಶುದ್ಧಿ, ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾ, ಬಿಂಬಶುದ್ಧಿ, ಅಧಿವಾಸ ಹೋಮ, ಪ್ರತಿಷ್ಠಾಪನಾ ಹೋಮಾದಿಗಳು, ಫೆ.2ರಂದು ಬೆಳಗ್ಗೆ 7ಕ್ಕೆ ಶ್ರೀ ನಾಗದೇವರ ಪ್ರತಿಷ್ಠಾಪನೆ ಋಕ್ ಸಂಹಿತಾಪಾರಾಯಣ, ಮಧ್ಯಾಹ್ನ ತತ್ವ ಹೋಮಾದಿಗಳು, ಸಂಜೆ ಬ್ರಹ್ಮಕಲಶ ಸ್ಥಾಪನೆ, ಆಶ್ಲೇಷಾಬಲಿ, ಫೆ.3ರ ಬೆಳಗ್ಗೆ ಪ್ರಾಯಶ್ಚಿತ ತಿಲ ಹೋಮ, ಕೂಷ್ಮಾಂಡ ಹೋಮ, ಪವಮಾನ ಹೋಮ, ಅಧಿವಾಸ ಹೋಮ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಸಂದರ್ಶನ, ತೀರ್ಥಪ್ರಸಾದ ವಿತರಣೆ ತಂತ್ರಿ ಹೃಷಿಕೇಶ ಬಾಯರಿ ನೇತೃತ್ವದಲ್ಲಿ ಜರುಗಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.