ಗಂಗಾವತಿ: ನಗರದ ಟಿಎಪಿಸಿಎಂಎಸ್ ಆವರಣದಲ್ಲಿ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ನಗರ ಘಟಕದ ಸಭೆ ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ಪಡಿತರ ವಿತರಕರು ಮತ್ತು ನ್ಯಾಯಬೆಲೆ ಅಂಗಡಿ ಮಾಲೀಕರು ಭಾಗವಹಿಸಿದ್ದ ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಸಂಘದ ಗೌರವಾಧ್ಯಕ್ಷ ಟಿ.ಎಂ.ಚನ್ನಬಸವ ಶಾಸಿ ಮಾತನಾಡಿ, ಪಡಿತರ ವಿತರಕರ ಹಾಗೂ ನ್ಯಾಯಬೆಲೆ ಅಂಗಡಿಕಾರರ ಸಮಸ್ಯೆಗಳಿಗೆ ಸಂಘ ಸ್ಪಂದಿಸಲಿದ್ದು, ಬೆಂಬಲವಾಗಿ ನಿಲ್ಲಲಿದೆ ಎಂದರು.
ಸಂಘದ ಅಧ್ಯಕ್ಷ ಕೆ.ಮಂಜುನಾಥ ಮಾತನಾಡಿ, ಪಡಿತರ ವಿತರಣೆಯಲ್ಲಿ ಸಾರ್ವಜನಿಕರಿಗೆ ಗೊಂದಲವಾಗದಂತೆ ಎಚ್ಚರಿಕೆವಹಿಸಲಾಗುತ್ತಿದ್ದು, ಸರ್ಕಾರದ ಯೋಜನೆಗಳನ್ನು ಸಮರ್ಪಕ ಜಾರಿಗೊಳಿಸಲು ಸರ್ಕಾರ ಗಮನಹರಿಸಲಿದೆ ಎಂದರು.
ಇದೇ ಸಂದರ್ಭದಲ್ಲಿ ನಗರ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಟಿ.ಎಂ.ಚನ್ನಬಸವಶಾಸಿ (ಗೌರವಾಧ್ಯಕ್ಷ), ಕೆ.ಮಂಜುನಾಥ (ಅಧ್ಯಕ್ಷ), ಎಚ್.ವೀರಭದ್ರಪ್ಪ (ಉಪಾಧ್ಯಕ್ಷ), ಮಹ್ಮದ್ ಯಾಜ್ ಶರ್ೀ ( ಕಾರ್ಯದರ್ಶಿ), ಗಿರೀಶ್‌ಕುಮಾರ (ಸಹಕಾರ್ಯದರ್ಶಿ), ವಾಜೇಂದ್ರರಾವ್ ದೇಶಪಾಂಡೆ (ಕೋಶಾಧ್ಯಕ್ಷ), ಪುಟ್ಟಮ್ಮ ಗಿಡ್ಡಿ, ಶಿವಬಸಮ್ಮ,
ಶ್ವೇತಾ, ಸಿದ್ದಣ್ಣ ಪತ್ತಾರ, ರಾಜಶೇಖರ, ಮಹ್ಮದ್, ಅನ್ವರ್ ಹುಸೇನ್ ಕಾನ್, ನಜೀರ್ ಅಹ್ಮದ್, ಮಹ್ಮದ್, ಮಹ್ಮದ್ ಹಯಾಜ್, ಶೆಕ್ಷಾವಲಿ, ಮೌನೇಶ ಪತ್ತಾರ, ಪ್ರವೀಣಕುಮಾರ, ಶಂಕರ, ಆರ್.ಎಂ.ಸಿದ್ದರಾಮಯ್ಯ, ಬಸವರಾಜ, ಯಮನೂರಪ್ಪ , ಸೈಯ್ಯದ್ ಅಲಿ, ನಾಗರಾಜ(ನಿರ್ದೇಶಕರು) ಆಯ್ಕೆಯಾದರು.