More

    ಕಮಿಷನ್ ಹಣ ಹೆಚ್ಚಳಕ್ಕೆ ನ್ಯಾಯಬೆಲೆ ಅಂಗಡಿ ವರ್ತಕರ ಆಗ್ರಹ


    ಸಿದ್ದಾಪುರ: ನ್ಯಾಯಬೆಲೆ ಅಂಗಡಿ ಮಾಲೀಕರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ತಾಲೂಕು ನ್ಯಾಯಬೆಲೆ ಅಂಗಡಿ ವರ್ತಕರು ಹಾಗೂ ಸೇವಾ ಸಹಕಾರಿ ಸಂಘಗಳು ತಹಸೀಲ್ದಾರ್ ಮಂಜುನಾಥ ಮುನ್ನೊಳಿ ಅವರ ಮೂಲಕ ಮುಖ್ಯಮಂತ್ರಿಗೆ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.


    ರಾಜ್ಯ ಸರ್ಕಾರ ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿ ಹೊಂದಿದ ಬಡವರಿಗೆ ಅನ್ನಭಾಗ್ಯ ಯೋಜನೆಯಲ್ಲಿ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಆಶ್ವಾಸನೆ ನೀಡಿದೆ.

    ಕೇಂದ್ರ ಸರ್ಕಾರದಿಂದ 5 ಕೆಜಿ, ರಾಜ್ಯ ಸರ್ಕಾರದಿಂದ 5 ಕೆ.ಜಿ. ಎಂದು ಪ್ರಕಟಿಸಿದ್ದಿರಿ. ಕೇಂದ್ರ ಸರ್ಕಾರದ 5 ಕೆ.ಜಿ. ಅಕ್ಕಿ ಬಂದಿರುತ್ತದೆ. ರಾಜ್ಯ ಸರ್ಕಾರ 5 ಕೆ.ಜಿ. ಬದಲು ನಗದು ಜಮಾ ಮಾಡುವ ಯೋಜನೆ ತಂದಿದ್ದು, ಇದರಿಂದ ನ್ಯಾಯಬೆಲೆ ಅಂಗಡಿ ವರ್ತಕರ ಸೇವೆಗೆ ಕಲ್ಲು ಹೊಡೆದಂತಾಗಿದೆ.

    ನ್ಯಾಯಬೆಲೆ ಅಂಗಡಿಯವರು ಇದರ ಕಮಿಷನ್ ಹಣದಿಂದ ಬದುಕು ಸಾಗಿಸಬೇಕಾಗಿದೆ. ನಮಗೆ ಬರಬೇಕಾದ ಕಮಿಷನ್ ಹಣವೂ ಸಕಾಲಕ್ಕೆ ನೀಡುತ್ತಿಲ್ಲ. ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ನೀಡುತ್ತಿರುವ ಕಮಿಷನ್ ಕಡಿಮೆ.ರಾಜ್ಯ ಸರ್ಕಾರ ನ್ಯಾಯಬೆಲೆ ಅಂಗಡಿಯವರ ಪರವಾಗಿಯೂ ನಿಂತು ನಮಗೆ ಬರಬೇಕಾದ ಈವರೆಗಿನ ಕಮಿಷನ್ ಹಣ ನೀಡಬೇಕು.

    ಅಕ್ಕಿಯ ಬದಲು ಹಣ ನೀಡುವುದನ್ನು ನಿಲ್ಲಿಸಿ ಅಕ್ಕಿ ನೀಡಬೇಕು. ಇಲ್ಲವೆ, ಸದರಿ ಅಕ್ಕಿಗೆ ತಗಲುವ ಕಮಿಷನ್ ಹಣವನ್ನು ನ್ಯಾಯಬೆಲೆ ಅಂಗಡಿ ವರ್ತಕರ ಖಾತೆಗೆ ನೀಡಬೇಕು ಎಂದು ಆಗ್ರಹಿಸಿದರು.


    2018ರಿಂದ ಇ- ಕೆವೈಸಿ ಹಣ ನೀಡಬೇಕು. ಉಳಿದ ರಾಜ್ಯಗಳಲ್ಲಿ ನೀಡುತ್ತಿದ್ದಂತೆ ಪ್ರತಿ ಕ್ವಿಂಟಲ್‌ಗೆ 250 ರೂ.ಗಳಂತೆ ಕಮಿಷನ್ ಹಣ ಹೆಚ್ಚು ಮಾಡಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.


    ತಾಲೂಕು ಪಡಿತರ ವಿತರಕರ ಸಂಘದ ಅಧ್ಯಕ್ಷ ಲಿಂಗರಾಜ್ ಜಿ. ನಾಯ್ಕ, ಉಪಾಧ್ಯಕ್ಷ ರಾಘವೇಂದ್ರ ಭಟ್ಟ ಸಿದ್ದಾಪುರ, ಜಿ.ಡಿ. ಹೆಗಡೆ ದೊಡ್ಮನೆ, ಮಂಜಪ್ಪ ನಾಯ್ಕ ಹಸ್ವಂತೆ, ರಮೇಶ ಎನ್. ನಾಯ್ಕ ಹಲಗೇರಿ, ಜಿ.ಆರ್. ನಾಯ್ಕ ಕಾನಗೋಡು, ಗಣಪತಿ ಕೆ. ಹಿತ್ಲಕೊಪ್ಪ, ಅಶೋಕ ಡಿ. ನಾಯ್ಕ ಬೇಡ್ಕಣಿ, ಚಂದ್ರ ಬಿದ್ರಕಾನ, ಎಂ.ಐ. ನಾಯ್ಕ ಲಂಬಾಪುರ, ಕೆರಿಯಾ ಗೌಡ ಗೊಳಿಮಕ್ಕಿ, ಪಿ.ಡಿ. ನಾಯ್ಕ ಗುಂಜಗೋಡು, ಶಶಿಧರ ಆರ್. ಹೆಗೆ ಕಂಚಿಕೈ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts