ಕಾರವಾರ: ರಥ ಸಪ್ತಮಿ(Ratha Saptami )ಯ ಅಂಗವಾಗಿ ಪತಂಜಲಿ ಯೋಗ ಸಮಿತಿ ಹಾಗೂ ಭಾರತ ಸ್ವಾಭಿಮಾನ ಟ್ರಸ್ಟ್ನಿಂದ 108 ಸೂರ್ಯ ನಮಸ್ಕಾರ ಪ್ರದರ್ಶನವನ್ನು ನಗರದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಬೆಳಗ್ಗೆ ಪ್ರದರ್ಶಿಸಲಾಯಿತು. ಯೋಗ ಸಾಧಕರು, ಪೊಲೀಸ್ ಸಿಬ್ಬಂದಿ, ಸ್ಟಾರ್ ಚಾಯ್ಸ್ ನೃತ್ಯ ಕಲಾ ಶಾಲೆಯ ಸದಸ್ಯರು ಸೇರಿ ಸೇರಿ ನೂರಾರು ಜನ ಪಾಲ್ಗೊಂಡಿದ್ದರು.
ಸಾಮಾಜಿಕ ಅರಣ್ಯ ವಿಭಾಗದ ಡಿಎಫ್‌ಒ ಮಂಜುನಾಥ ನಾವಿ ಅತಿಥಿಯಾಗಿ ಮಾತನಾಡಿ, ಒತ್ತಡದ ಜೀವನದಲ್ಲಿ ಮಾನಸಿಕ ಸ್ವಾಸ್ತ್ಯ ಕಾಪಾಡಿಕೊಳ್ಳಲು ಯೋಗ ಸಹಾಯಕ ಎಂದರು. ಎಸ್‌ಪಿ ಕಚೇರಿಯ ಸಹಾಯಕ ಆಡಳಿತ ಅಧಿಕಾರಿ ಮಗ್ದುಂ ಅವರು ಯೋಗ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಸಹಕಾರಿ ಎಂದರು. ನಗರಸಭೆ ಸದಸ್ಯ ನಂದಾ ನಾಯ್ಕ, ಪತಂಜಲಿ ಯೋಗ ಸಮಿತಿಯ ಮಂಡಲ ಪ್ರಭಾರಿ ಪ್ರಶಾಂತ ರೇವಣಕರ್, ಶೇಷಗಿರಿ ಮುಂಡಳ್ಳಿ ವೇದಿಕೆಯ ಮೇಲಿದ್ದರು.
ಇದನ್ನೂ ಓದಿ: https://www.vijayavani.net/dravids-car-hit-by-auto-rahul-got-into-an-argument-with-the-driverhttps://youtu.be/CbOr9WsRwso