ದೇವದುರ್ಗ: ರಾಷ್ಟ್ರಕವಿ ಕುವೆಂಪು ಕನ್ನಡ ಸಾಹಿತ್ಯ ಲೋಕದ ಧ್ರುವತಾರೆಯಾಗಿದ್ದು, ಅವರ ಸಾಹಿತ್ಯದಲ್ಲಿ ವೈಚಾರಿಕತೆಗೆ ಮಹತ್ವ ನೀಡಿದ್ದಾರೆ ಎಂದು ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ ಹೇಳಿದರು.
ಪಟ್ಟಣದ ಮಿನಿವಿಧಾನಸೌಧ ಸಭಾಂಗಣದಲ್ಲಿ ಕುವೆಂಪು ಜಯಂತಿ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ಕುವೆಂಪು ವಿಶ್ವ ಮತ, ಮನುಜ ಮತ, ಸರ್ವೋದಯದ ಪಥ, ಸಮನ್ವಯ ದೃಷ್ಟಿ ಇಟ್ಕೊಂಡಿದ್ದರು. ಈ ದೂರ ದೃಷ್ಟಿಯೊಂದಿಗೆ ‘ಅನಿಕೇತನ’ ಕವನದಲ್ಲಿ ವಿಶ್ವ ಮಾನವಾದ ಸಂದೇಶ ನೀಡಿದ್ದಾರೆ.
ಕುವೆಂಪು ಭಾವಜೀವಿಯಾಗಿ, ಕವಿಯಾಗಿ, ಕಥೆಗಾರರಾಗಿ, ಕಾದಂಬರಿಕಾರಾಗಿ, ನಾಟಕಕಾರರಾಗಿ ಸಾಹಿತ್ಯ ಲೋಕದ ಎಲ್ಲ ಪ್ರಕಾರದ ಸಾಹಿತ್ಯ ಕೃಷಿ ಗೈದು ದಿಗ್ಗಜರನಿಸಿದ್ದಾರೆ. ಸಾಹಿತ್ಯಕ್ಕೆ ವೈಚಾರಿಕತೆಯ ಸ್ಪರ್ಶ ನೀಡಿದ್ದಾರೆ ಎಂದರು.
ಇದನ್ನೂ ಓದಿ: ಸಾಹಿತ್ಯ ಕ್ಷೇತ್ರಕ್ಕೆ ಕುವೆಂಪು ಕೊಡುಗೆ ಅಪಾರ
ಕುವೆಂಪು ಭಾವಚಿತ್ರಕ್ಕೆ ಗ್ರೇಡ್-2 ತಹಸೀಲ್ದಾರ್ ವೆಂಕಟೇಶ್ ಕುಲಕರ್ಣಿ ಪೂಜೆ ಸಲ್ಲಿಸಿದರು. ಶಿರಸ್ತೇದಾರ್ ಗೋವಿಂದ ನಾಯಕ, ಸಿಬ್ಬಂದಿ ಭೀಮರಾಯ ನಾಯಕ, ಪ್ರವೀಣ್ ಕುಮಾರ್, ಅನಿಲ್ ಕುಮಾರ್, ಹರೀಶ್, ಹನುಮಂತರಾಯ ನಾಯಕ, ವೀರೇಶ್, ಪಾರ್ವತಿ, ಬಸವರಾಜ್ ಛಲವಾದಿ, ಗ್ರಾಮ ಸಹಾಯಕ ಶಿವರಾಯ, ಭೀಮಣ್ಣ ಗೋಸಲ್, ಬಸವರಾಜ್ ಕೊಪ್ಪರ ಇತರರಿದ್ದರು.