ಪೆರ್ಲ: ವಾಯ್ಸ ಆಫ್ ವರ್ಲ್ಡ್ ಮಲಯಾಳಿ ಕೌನ್ಸಿಲ್ ಈ ವರ್ಷ ಶಿಕ್ಷಕ ದಿನದಂದು ಘೋಷಿಸಿದ ಗುರುಶ್ರೇಷ್ಠ ಪ್ರಶಸ್ತಿಗೆ ಕಾಸರಗೋಡು ಜಿಲ್ಲೆಯಿಂದ ರಂಜಿತ್ .ಎ.ಎಸ್. ಪೆರ್ಲ ಆಯ್ಕೆಗೊಂಡಿದ್ದಾರೆ. ಈ ಪ್ರಶಸ್ತಿ ತಿರುವನಂತಪುರದಲ್ಲಿ ಜರುಗುವ ಸಮಾರಂಭದಲ್ಲಿ ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ವಿತರಿಸಲಿರುವರು ಎಂದು ವಿ.ಡಬ್ಲುೃಎಂಸಿ ಚೇರ್ಮನ್ ಅಜಿತ್ ಪಿಳ್ಳೈ ತಿಳಿಸಿದ್ದಾರೆ. ಕಾಸರಗೋಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಂಜಿತ್ ಕೇರಳ ಪೊಲೀಸ್ ಸೇವೆಯಲ್ಲಿ ಸರ್ಕಾರಿ ಸೇವೆಗೆ ಸೇರಿಕೊಂಡಿದ್ದರು. ಬಳಿಕ 2012ರಲ್ಲಿ ಜಿ.ಎಚ್.ಎಸ್.ಎಸ್ ಪಾಂಡಿಯಲ್ಲಿ ಅಧ್ಯಾಪಕ ಸೇವೆಗೆ ನಿಯುಕ್ತಿಗೊಂಡರು. ಪೆರ್ಲ ಅಪ್ಪಯಮೂಲೆ ನಿವಾಸಿ, ಕಲಾವಿದ ಸುಂದರ ಅಪ್ಪಯಮೂಲೆ-ನಿವೃತ್ತ ಪಶುಸಂಗೋಪನಾ ಇಲಾಖೆ ಉದ್ಯೋಗಿ ಸುಶೀಲಾ ಕೊರತಿ ದಂಪತಿ ಪುತ್ರ.