ಜಿಲ್ಲೆ

ಜಾರಕಿಹೊಳಿ ಸಿಡಿ ಕೇಸ್​: ಇಂದು ವಿಚಾರಣೆಗೆ ಬರಬೇಕಿದ್ದ ದಿನೇಶ್​ ಕಲ್ಲಹಳ್ಳಿ ಗೈರು!

arunakunigal

ರಾಮನಗರ: ರಮೇಶ್​ ಜಾರಕಿಹೊಳಿ ಅವರದ್ದು ಎನ್ನಲಾದ ಸೆಕ್ಸ್​ ವಿಡಿಯೋ ಸಮೇತ ಸಂತ್ರಸ್ತ ಯುವತಿಗೆ ನ್ಯಾಯ ಕೊಡಿಸಬೇಕು. ಈ ಪ್ರಕರಣದ ಸತ್ಯಾಸತ್ಯತೆ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್​ ಠಾಣೆಗೆ ದೂರು ನೀಡುವ ಮೂಲಕ ರಾಜ್ಯ ರಾಜಕೀಯದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿದ್ದು, ಸಾಮಾಜಿಕ ಕಾರ್ಯಕರ್ತ ದಿನೇಶ್​ ಕಲ್ಲಹಳ್ಳಿ.

ಈ ಪ್ರಕರಣ ಕುರಿತು ದಿನೇಶ್ ಕಲ್ಲಹಳ್ಳಿಗೆ ಇಂದು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದರಾದರೂ, ಈ ದಿನ ವಿಚಾರಣೆಗೆ ಬರಲ್ಲ, ಮಾ. 9ರಂದು ಬರುತ್ತೇನೆ ಎಂದು ಪೊಲೀಸ್ ಅಧಿಕಾರಿಗೆ ದಿನೇಶ್ ಕಲ್ಲಹಳ್ಳಿ ಪತ್ರ ಬರೆದಿದ್ದಾರೆ. ಇದನ್ನೂ ಓದಿರಿ ನನ್ನ ಕ್ಷೇತ್ರದಲ್ಲಿ ಭಾರಿ ಕಿರುಕುಳ ಕೊಡ್ತಿದ್ದಾರೆ, ನನ್ನನ್ನು ನೀವೆ ರಕ್ಷಿಸಿ: ಶಾಸಕನ ಅಳಲು

ರಮೇಶ್​ ಜಾರಕಿಹೊಳಿ ಸಿಡಿ ಬಯಲು ಮಾಡಿದ ನನಗೆ ಬೆದರಿಕೆ‌ ಕರೆಗಳು ಬರುತ್ತಿವೆ. ನನಗೆ ಸೂಕ್ತ ಭದ್ರತೆ ಬೇಕಾಗಿದೆ. ಹೀಗಾಗಿ ವಿಚಾರಣೆಗೆ ಇಂದು ಹಾಜರಾಗಲು ಸಾಧ್ಯವಾಗಿಲ್ಲ. ಇದೇ ತಿಂಗಳ 9ರಂದು ಹಾಜರಾಗುತ್ತೇನೆ ಎಂದು ದಿನೇಶ್ ಕಲ್ಲಹಳ್ಳಿ ವಾಟ್ಸ್ಆ್ಯಪ್ ಮೂಲಕ ಪೊಲೀಸ್​ ಅಧಿಕಾರಿಗೆ ಪತ್ರ ರವಾನಿಸಿದ್ದಾರೆ. ಅಲ್ಲದೆ, ಫೋನ್​ ಮೂಲಕವೂ ಮಾತನಾಡಿ ತಿಳಿಸಿದ್ದಾರೆ.

ಇತ್ತ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಕನಕಪುರ ಗ್ರಾಮಾಂತರ ಪೊಲೀಸ್​ ಠಾಣೆಗೆ ದಿನೇಶ್ ಕಲ್ಲಹಳ್ಳಿ ದೂರು ಕೊಟ್ಟಿದ್ದು, ಅವರ ನಿವಾಸದ ಬಳಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಬೆದರಿಕೆ ಕರೆ ಹಾಗೂ ಅಪರಿಚಿತ ವ್ಯಕ್ತಿಗಳು ಮನೆ ಮುಂದೆ ಓಡಾಡುತ್ತಿದ್ದಾರೆ. ಅದರಿಂದ ಸೂಕ್ತ ಭದ್ರತೆ ಒದಗಿಸಬೇಕು ಎಂದು ದಿನೇಶ್ ದೂರು ಕೊಟ್ಟಿದ್ದಾರೆ.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ