ಜಿಲ್ಲೆ

ವ್ಯಕ್ತಿತ್ವ ವಿಕಸನವೇ ಧರ್ಮದ ಗುರಿ: ಶೀ ರಂಭಾಪುರಿ ಜಗದ್ಗುರು ಅಭಿಮತ

ಬೆಂಗಳೂರು: ಧರ್ಮ ಮತ್ತು ದೇಶ ಮನುಷ್ಯನ ಎರಡು ಕಣ್ಣಿದ್ದಂತೆ. ಸಂಸತಿ, ಸಭ್ಯತೆ, ಸಾಮರಸ್ಯ ಬೆಳೆಸುವುದೇ ಧರ್ಮದ ಗುರಿಯಾಗಿದೆ. ವ್ಯಕ್ತಿತ್ವ ವಿಕಸನಕ್ಕೆ ವೀರಶೈವ ಧರ್ಮ ಸದಾ ಶ್ರಮಿಸುತ್ತಾ ಬಂದಿದೆ ಎಂದು ಬಾಳೆಹೊನ್ನೂರು ಶೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದ್ದಾರೆ.

ನಗರದ ಶ್ರೀ ಜಗದ್ಗುರು ರೇಣುಕಾಚಾರ್ಯ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂಸತಿ ಸಂವರ್ಧನಾ ಸಮಾರಂಭದಲ್ಲಿ ಮಾತನಾಡಿ ಆಶೀರ್ವಚನ ನೀಡಿದರು.

ಸಕಲ ಜೀವಾತ್ಮರಿಗೆ ಸದಾ ಒಳಿತನ್ನೇ ಬಯಸಿದ ವೀರಶೈವ ಧರ್ಮ ಉತಷ್ಟ ಸಂಸ್ಸೃತಿಯ ಸಂವರ್ಧನೆಗಾಗಿ ಶ್ರಮಿಸಿದೆ. ಜಾತಿ&ಮತ&ಪಂಥಗಳ ಗಡಿ ಮೀರಿ ಉದಾತ್ತ ಜೀವನ ಮೌಲ್ಯಗಳನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಗುರಿಯಿಲ್ಲದ ಗುರಿ ಸಾಧಿಸದ ಜೀವನ ನಿರರ್ಥಕ. ಪ್ರಾಪಂಚಿಕ ಸಂಬಂಧಗಳು ಕೆಲವು ಸಂದರ್ಭದಲ್ಲಿ ಶಿಥಿಲಗೊಂಡರೂ, ಗುರು ಶಿಷ್ಯರ ಸಂಬಂಧ ಯಾವಾಗಲೂ ಬೆಳೆಯುತ್ತಾ ಬಂದಿದೆ. ಶೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಅಹಿಂಸಾದಿ ಧ್ಯಾನ ಪರ್ಯಂತರವಾದ ದಶಧರ್ಮ ಸೂತ್ರಗಳು ಸಕಲರ ಬಾಳಿಗೆ ಬೆಳಕು ತೋರಿವೆ ಎಂದರು.

ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್​ ಮಾತನಾಡಿ, ರಂಭಾಪುರಿ ಶೀಗಳ ಧರ್ಮ ಜಾಗೃತಿ ಕಾರ್ಯಕ್ರಮಗಳು ಸಮಾಜದಲ್ಲಿ ಜಾಗೃತಿಯನ್ನುಂಟು ಮಾಡಿವೆ. ಅವರ ಧಾರ್ಮಿಕ ಮತ್ತು ಸಾಮಾಜಿಕ ವಿಚಾರ ಧಾರೆಗಳು ಮುಂದಿನ ತಲೆಮಾರಿಗೆ ದಾರಿದೀಪವಾಗಿವೆ. ಮಾನವ ಧರ್ಮಕ್ಕೆ ಜಯವಾಗಲಿ ಎಂದರೆ, ಸಂರ್ಷ ಉಂಟಾಗದ ಸಮಾಜ ಕಟ್ಟುವುದಾಗಿದೆ. ಇಲ್ಲಿ ಜಾತಿ, ಮತ, ಧರ್ಮ ಬೇಧವಿಲ್ಲದೆ, ಎಲ್ಲರೂ ಒಂದೇ ಎಂಬ ಸಂದೇಶ ಮುಖ್ಯವಾಗುತ್ತದೆ. ಇದನ್ನು ಎಲ್ಲರೂ ಅನುಸರಿಸಿಕೊಂಡು ಮುಂದೆ ಸಾಗಬೇಕು ಎಂದರು.

ಭಾರತದ ಸಂಸತಿ ಹಾಗೂ ಧರ್ಮ ಪರಂಪರೆಗೆ ವಿಶೇಷ ಗೌರವ ಇದೆ. ವಿದೇಶಿಗರೂ ನಮ್ಮ ಧಾರ್ಮಿಕ ಕೇಂದ್ರಗಳಿಗೆ ಬರುತ್ತಿದ್ದಾರೆ. ಇದು ನಿಜವಾದ ಧಾರ್ಮಿಕ ಶಕ್ತಿ. ಹೀಗಿರುವಾಗ ನಮ್ಮ ಸಂಸತಿ&ಪರಂಪರೆಯನ್ನು ಬೆಳೆಸಿಕೊಂಡು ಹೋಗಬೇಕು. ಸಂಸತಿ ಇದ್ದರೆ ಮಾತ್ರ ಮಾನವೀಯ ಗುಣ ಉಳಿಯುತ್ತದೆ. ಇದರಿಂದ ಜೀವನ ಪಾವನವಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಾಧ್ಯಾಪಕಿ ಡಾ. ಮಮತಾ ಸಾಲಿಮಠ ಅವರು ಶೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಜ್ಞಾನ ಕ್ರಿಯಾತ್ಮಕ ವಿಚಾರಧಾರೆ ಕುರಿತು ಉಪನ್ಯಾಸ ನೀಡಿದರು.

ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಚಿಕ್ಕಕಲ್ಲುಬಾಳುಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಬೆಳ್ಳಾವಿ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಬಿ.ಎಸ್​.ಪರಮಶಿವಯ್ಯ, ಅಖಿಲ ಭಾರತೀಯ ವೀರಶೈವ ಮಹಾಸಭಾ ಬೆಂಗಳೂರು ಟಕದ ಅಧ್ಯಕ್ಷ ಗುರುಸ್ವಾಮಿ ಮತ್ತಿತರರಿದ್ದರು.

ಅಂತರಂಗ ಬಹಿರಂಗವನ್ನು ಪರಿಶುದ್ಧಗೊಳಿಸುವ ಶಕ್ತಿ ಗುರುವಿಗೆ ಇದೆ. ಬದುಕು ಬಲಗೊಳ್ಳಲು ಗುರುವಿನ ಉಪದೇಶ ಅವಶ್ಯಕ.
- ರೇಣುಕ ಶಿವಾಚಾರ್ಯ ಸ್ವಾಮೀಜಿ, ಎಡೆಯೂರು ಕ್ಷೇತ್ರ