ಬಾಳೆಹೊನ್ನೂರು : ರಾಜ್ಯದ ಗಡಿ ಜಿಲ್ಲೆ ಬೀದರ್‌ನ ಬಸವಕಲ್ಯಾಣದಲ್ಲಿ ಮುಂಬರುವ ಸೆ.22 ರಿಂದ ಅ.02 ರವರೆಗೆ ನಡೆಯಲಿರುವ ಶರನ್ನವರಾತ್ರಿ ದಸರಾ ಮಹೋತ್ಸವದ ಅಡ್ಡಪಲ್ಲಕ್ಕಿ ವಿಷಯವಾಗಿ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಭಕ್ತರಿಗೆ ಸ್ಪಷ್ಟೀಕರಣ ನೀಡಿದ್ದಾರೆ.
ಹಾರಕೂಡ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯ ಸ್ವಾಮಿಗಳ ಮಾರ್ಗದರ್ಶನದಲ್ಲಿ ಸ್ವಾಗತ ಸಮಿತಿಯವರು ಮತ್ತು ಆ ಭಾಗದ ಭಕ್ತರ ಇಚ್ಛಾನುಸಾರ ವಿಜಯ ದಶಮಿಯಂದು ತೆರೆದ ವಾಹನದ ಮೇಲೆ ಅಡ್ಡಪಲ್ಲಕ್ಕಿ ಇಟ್ಟು ಶಮೀ ಸೀಮೋಲ್ಲಂಘನ ಬನ್ನಿ ಪೂಜೆಗೆ ಆಗಮಿಸಲು ಜಗದ್ಗುರುಳು ಸಮ್ಮತಿ ನೀಡಿದ್ದು, ಇನ್ನುಳಿದಂತೆ ನಿಗದಿ ಪಡಿಸಿದ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲಿವೆ ಎಂದು ಜಗದ್ಗುರುಗಳು ಸ್ಪಷ್ಟಪಡಿಸಿದ್ದಾರೆ.