ಗಂಗಾವತಿ ಲಯನ್ಸ್ ಕ್ಲಬ್ ಪ್ರೌಢ ಶಾಲೆಯಲ್ಲಿ ಸದ್ಭಾವನಾ ಸಂಸ್ಥೆ ಮತ್ತು ಭಾರತ ಸಂಸ್ಕೃತಿ ಪ್ರತಿಷ್ಟಾನದಿಂದ ಸೋಮವಾರ ಹಮ್ಮಿಕೊಂಡಿದ್ದ ರಾಮಾಯಣ ಪರೀಕ್ಷೆ ವಿಜೇತರಿಗೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ವಿಜೇತರಿಗೆ ಪ್ರಮಾಣ ಪತ್ರ ನೀಡಿ ಸೋಮವಾರ ಗೌರವಿಸಲಾಯಿತು.  
ಜಿಲ್ಲೆ

ರಾಮಾಯಣ ವಿಶ್ವದ ಸರ್ವಶ್ರೇಷ್ಠವಾದ ಸಾರ್ವತ್ರಿಕ ಮಹಾಕಾವ್ಯ

ಶಶಿಧರ ಎಲ್

ಗಂಗಾವತಿ: ರಾಮಾಯಣ ವಿಶ್ವದ ಸರ್ವಶ್ರೇಷ್ಠವಾದ ಮಹಾಕಾವ್ಯ. ರಾಮಾಯಣದ ಕುರಿತಾದ ಹಲವು ಸಾಕ್ಷಾೃಧಾರಗಳು ದೇಶದ ಪ್ರತಿಯೊಂದು ಸ್ಥಳದಲ್ಲಿ ದೊರೆಯುತ್ತಿವೆ ಎಂದು ಮಹಾವಿದ್ಯಾಲಯ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಪೊ.ಶರಣಬಸಪ್ಪ ಬಿಳಿಯೆಲೆ ಹೇಳಿದರು.

ನಗರದ ಲಯನ್ಸ್ ಕ್ಲಬ್ ಪ್ರೌಢ ಶಾಲೆಯಲ್ಲಿ ಸದ್ಭಾವನಾ ಸಂಸ್ಥೆ ಮತ್ತು ಭಾರತ ಸಂಸ್ಕೃತಿ ಪ್ರತಿಷ್ಠಾನದಿಂದ ಸೋಮವಾರ ಹಮ್ಮಿಕೊಂಡಿದ್ದ ರಾಮಾಯಣ ಪರೀಕ್ಷೆ ವಿಜೇತರಿಗೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹರ್ಷಿ ವಾಲ್ಮೀಕಿ ರಚಿಸಿದ ಪ್ರಸ್ತುತ ರಾಮಾಯಣ, ನೈಜ ಘಟನೆಗಳನ್ನು ಆಧರಿಸಿದೆ. ಏಳು ಕಾಂಡಗಳು 24,000 ಶ್ಲೋಕಗಳು, 500 ಉಪ ಅಧ್ಯಾಯಗಳನ್ನೊಂಡಿದೆ. ಬಾಲ ಕಾಂಡದಿಂದ ಆರಂಭವಾಗಿ ಉತ್ತರ ಕಾಂಡದವರೆಗೆ ಮರ್ಯಾದೆ ಪುರುಷ ಶ್ರೀರಾಮಚಂದ್ರರ ಹಲವು ಸಂಗತಿ ತಿಳಿಯಬಹುದಾಗಿದೆ. ರಾಮಾಯಣ ಸಾರ್ವತ್ರಿಕ ಮಹಾಕಾವ್ಯವಾಗಿದ್ದು, ಎಲ್ಲ ಕಾಲಕ್ಕೂ ಅನ್ವಯಿಸುವ ಶಾಶ್ವತ ಮೌಲ್ಯಗಳಿವೆ ಎಂದರು.

ಸದ್ಭಾವನಾ ಸಂಸ್ಥೆ ಯೋಜನೆ ಮತ್ತು ಸಮಾಜಮುಖಿ ಚಟುವಟಿಕೆಗಳು ಕುರಿತು ಎಸ್‌ಕೆಎನ್‌ಜಿ ಸರ್ಕಾರಿ ಕಾಲೇಜಿನ ಉಪನ್ಯಾಸಕ ಪವನಕುಮಾರ ಗುಂಡೂರು ಮಾತನಾಡಿದರು.

ಸಂಸ್ಥೆ ಪದಾಧಿಕಾರಿಗಳಾದ ಸುಬ್ರಮಣ್ಯ ರಾಯ್ಕರ್, ಶಾಂತಾರಾಯ್ಕರ್, ರವೀಂದ್ರ ಹೂಲಗೇರಿ, ಶಿವಾನಂದ ತಿಮ್ಮಾಪುರ, ಅಜ್ಜಯ್ಯ, ಆನಂದ ಕೆಲೋಜಿ, ಗಾಯತ್ರಿ ವೆರ್ಣೇಕರ್, ಕಸಾಪ ತಾಲೂಕಾಧ್ಯಕ್ಷ ಶ್ರೀನಿವಾಸ ಅಂಗಡಿ, ಉದ್ಯಮಿ ಶ್ರೀನಿವಾಸ ಕೆಲೋಜಿ ಇತರರಿದ್ದರು.

ರಾಮಾಯಣ ಪರೀಕ್ಷೆಯಲ್ಲಿ ಮೀರಾ ಪಾನಂಗಟಿ, ವೀಣಾ (ಪ್ರಥಮ), ಜ್ಯೋತಿ ವೆರ್ಣೇಕರ್ (ದ್ವೀತಿಯ), ಸುಲೋಚನಾ ಕುಲ್ಕರ್ಣಿ (ತೃತೀಯ) ಸೇರಿ ಸಮಾಧಾನ ಬಹುಮಾನ ಪಡೆದ ಆರು ಜನರಿಗೆ ನಗದು ಬಹುಮಾನದೊಂದಿಗೆ ಸನ್ಮಾನಿಸಲಾಯಿತು. ಮೂರನೇ ಬಾರಿಗೆ ಪರೀಕ್ಷೆ ಬರೆದ 87 ವರ್ಷದ ವಯಸ್ಸಿನ ವೃದ್ಧೆ ಹನುಮಾಕ್ಷಮ್ಮರನ್ನು ಸನ್ಮಾನಿಸಲಾಯಿತು.