ಜಿಲ್ಲೆ

ಶ್ರೀರಾಮನ ಆದರ್ಶ ಪಾಲನೆಯಿಂದ ಉತ್ತಮ ಸಮಾಜ : ತಹಸೀಲ್ದಾರ್ ರಮೇಶನ್ ಪೊಯಿನಾಚಿ

ಸೌಮ್ಯ ಆರ್

ಮುಳ್ಳೇರಿಯ: ಶ್ರೀರಾಮನ ಆದರ್ಶಗಳ ಪಾಲನೆಯಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಕಾಸರಗೋಡು ತಹಸೀಲ್ದಾರ್ ರಮೇಶನ್ ಪೊಯಿನಾಚಿ ಹೇಳಿದರು.

ಗೋಸಾಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ರಾಮಾಯಣ ಪ್ರವಚನ ಸಮಾರೋಪ ಹಾಗೂ ನಿವೃತ್ತ ಡೆಪ್ಯುಟಿ ತಹಸೀಲ್ದಾರ್ ನಾರಾಯಣ ಗೋಸಾಡ ಅವರನ್ನು ಸನ್ಮಾನಿಸಿ ಮಾತನಾಡಿದರು.

ಭಜನಾ ಸಂದ ಅಧ್ಯಕ್ಷ ಪ್ರಸಾದ ಮಣಿಯಾಣಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯ ಶಿಕ್ಷಕ ಗಂಗಾಧರ ರೈ ಮವ್ವಾರು, ಸೇವಾ ಸಮಿತಿ ಉಪಾಧ್ಯಕ್ಷ ಪ್ರಭಾಕರ ರೈ ಮಠದಮೂಲೆ, ಕೋಶಾಧಿಕಾರಿ ಪರಮೇಶ್ವರ ಭಟ್ ಗೋಸಾಡ, ಅರ್ಚಕ ರಾವೇಂದ್ರ ಚಡಗ ಗೋಸಾಡ, ಮೃದುಲ್ ರೈ, ಶ್ರೀಕ್ಷೇತ್ರದ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ, ರವಿರಾಜ್ ಮಲ್ಲಮೂಲೆ, ಭಜನಾ ಸಂದ ಕೋಶಾಧಿಕಾರಿ ಸುನೀಲ್ ಮಣಿಯಾಣಿ ಗೋಸಾಡ, ಸುಬ್ಬ ಪಾಟಾಳಿ ಗೋಸಾಡ, ರಾಜಕುಮಾರ್, ಹರಿಶ್ಚಂದ್ರ ಪಾಟಾಳಿ, ಭಾಸ್ಕರ ರೈ ಗೋಸಾಡ, ಧನ್ಯಶ್ರೀ ಚಡಗ ಹಾಗೂ ದಿವ್ಯಶ್ರೀ ಚಡಗ ಗೋಸಾಡ ಮೊದಲಾದವರಿದ್ದರು. ಕಾರ್ಯದರ್ಶಿ ಸತೀಶ್ ರೈ ಗೋಸಾಡ ಸ್ವಾಗತಿಸಿದರು. ಶ್ರೀ ಮಹಿಷಮರ್ದಿನಿ ಸೇವಾ ಸಮಿತಿ ಕಾರ್ಯದರ್ಶಿ ಸದಾಶಿವ ರೈ ಗೋಸಾಡ ವಂದಿಸಿದರು.