ಹೆಬ್ರಿ: ಬೆಂಗಳೂರು ಭಾರತ ಸಂಸ್ಕೃತಿ ಪ್ರತಿಷ್ಠಾನ ನಡೆಸಿದ ರಾಮಾಯಣ-ಮಹಾಭಾರತ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಪಿಆರ್‌ಎನ್ ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆ ಏಳು ವಿದ್ಯಾರ್ಥಿಗಳಿಗೆ ಸ್ವರ್ಣ ಪದಕ, ಪ್ರಶಸ್ತಿ ಪ್ರದಾನ, ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಪ್ರದಾನ ಗುರುವಾರ ನೆರವೇರಿತು.
ಉಡುಪಿ ಸಂಸ್ಕೃತ ಕಾಲೇಜು ಅಲಂಕಾರಶಾಸ್ತ್ರ ಪ್ರಾಧ್ಯಾಪಕ ಡಾ.ಅಮೃತೇಶ್ ಆಚಾರ್ಯ ಮಾತನಾಡಿ, ರಾಮಾಯಣ ಮತ್ತು ಮಹಾಭಾರತ ಅಧ್ಯಯನವನ್ನು ಜೀವನದಲ್ಲಿ ಅವಶ್ಯವಾಗಿ ಮಾಡಬೇಕು. ಇದು ನಮ್ಮ ನಡತೆ, ವ್ಯವಹಾರವನ್ನು ಶುದ್ಧೀಕರಿಸುತ್ತದೆ ಎಂದರು.
ಅಮೃತ ಭಾರತಿ ವಸತಿ ನಿಲಯ ಸದಸ್ಯ ರಾಮಕೃಷ್ಣ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಾದ ಧ್ರುವ ವಿಜಯ್, ಯತೀಶ್, ಪೂರ್ವಿ ಎಂ.ರಾವ್., ಪುಷ್ಕರ್ ಪೂಜಾರಿ, ಪ್ರಣಮ್ಯಾ ಕೆ, ಲಾವಣ್ಯ ಎಚ್.ವಿ., ಭಾರ್ಗವ ಅಡಿಗ ಸ್ವರ್ಣ ಪದಕ ಪಡೆದರು. ಪರೀಕ್ಷಾ ಸಂಯೋಜಕ ವೇದವ್ಯಾಸ ತಂತ್ರಿ ಮಡಾಮಕ್ಕಿ, ಅಮೃತಭಾರತಿ ವಿದ್ಯಾಲಯ ಮುಖ್ಯಸ್ಥರಾದ ಅಪರ್ಣಾ ಆಚಾರ್, ಶಕುಂತಳಾ, ಗುರೂಜಿ ಮಾತಾಜಿ ಉಪಸ್ಥಿತರಿದ್ದರು. ಶಿಕ್ಷಕಿ ಮೀನಾಕ್ಷಿ ಬಹುಮಾನಿತರ ಪಟ್ಟಿ ವಾಚಿಸಿದರು. ಶಿಕ್ಷಕಿ ಸೌಪರ್ಣಿಕಾ ಜೋಶಿ ನಿರೂಪಿಸಿದರು. ಸಾವಿತ್ರಿ ಕಿಣಿ ವಂದಿಸಿದರು.