ಜಿಲ್ಲೆ

ಅಧ್ಯಕ್ಷರಾಗಿ ಸಿ.ರಮಾನಂದ ಭಟ್ ಪುನರಾಯ್ಕೆ

ಇಂದಿರಾ ಎನ್ ಕೆ

ಕೋಟ: ವಿವೇಕ ವಿದ್ಯಾಸಂಸ್ಥೆಯ ಹಳೇ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆ ಮಹಾತ್ಮಾ ಗಾಂಧಿ ಸ್ಮಾರಕ ಭವನದಲ್ಲಿ ನಡೆಯಿತು. ಇತ್ತೀಚೆಗೆ ನಿವೃತ್ತರಾದ ಸಂಸ್ಕೃತ ಉಪನ್ಯಾಸಕ ಸಿ.ಮಂಜುನಾಥ ಉಪಾಧ್ಯ, ಬಾಲಕಿಯರ ಪ್ರೌಢಶಾಲೆ ಮುಖ್ಯಶಿಕ್ಷಕ ಕೆ.ಜಗದೀಶ ಹೊಳ್ಳ ಮತ್ತು ಸಮಾಜಶಾಸ್ತ್ರ ಉಪನ್ಯಾಸಕ ಅಶೋಕ್‌ಕುಮಾರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ವಿವೇಕ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಸಂಸ್ಥೆಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಾಧಕರನ್ನು ಹಾಗೂ ದ್ವಿತೀಯ ಪಿಯುಸಿಯ ಮೂರೂ ವಿಭಾಗಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರನ್ನು ನಗದು ಬಹುಮಾನ ನೀಡಿ ಪುರಸ್ಕಾರಿಸಲಾಯಿತು. ಸಂಘ ಅಧ್ಯಕ್ಷ ಸಿ.ರಮಾನಂದ ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಜಗದೀಶ ನಾವಡ ನಿವೃತ್ತರ ಕುರಿತು ಅಭಿನಂದನೆಯ ನುಡಿಗಳನ್ನಾಡಿದರು. ನಿವೃತ್ತ ಶಿಕ್ಷಕ ಪಿ.ಮಂಜುನಾಥ ಉಪಾಧ್ಯ ಪ್ರತಿಭಾ ಪುರಸ್ಕಾರ ನಡೆಸಿಕೊಟ್ಟರು. ಮೊದಲ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಸಿ.ರಮಾನಂದ ಭಟ್ ಅಧ್ಯಕ್ಷರಾಗಿ ಪುನರಾಯ್ಕೆಯಾದರು. ಕೋಶಾಧಿಕಾರಿಯಾಗಿ ಪಂಜು ಪೂಜಾರಿ ಯಡೆಟ್ಟು ಆಯ್ಕೆಯಾದರು. ಉಳಿದಂತೆ ಕಳೆದ ಸಾಲಿನ ಪದಾಧಿಕಾರಿಗಳನ್ನು ಮುಂದುವರಿಸಲು ಸಭೆ ತೀರ್ಮಾನಿಸಿತು. ಗೌರವ ಉಪಾಧ್ಯಕ್ಷರಾದ ವೆಂಕಟೇಶ ಉಡುಪ, ಪ್ರೇಮಾನಂದ್ ಮತ್ತು ಪ್ರೀತಿ ರೇಖಾ ಉಪಸ್ಥಿತರಿದ್ದರು. ಪ್ರೊ.ಎಚ್.ವಿ. ಸೋಮಯಾಜಿ ಸ್ವಾಗತಿಸಿದರು. ಕಾರ್ಯದರ್ಶಿ ಪಿ.ಸುಧಾಕರ್ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಪಿ. ಪ್ರಕಾಶ್ ಹೇರ್ಳೆ ಆಯ-ವ್ಯಯ ಪತ್ರ ಮಂಡಿಸಿದರು, ಶಿಕ್ಷಕ ಜಿ.ಸಂಜೀವ ಕಾರ್ಯಕ್ರಮ ಸಂಯೋಜಿಸಿದರು, ಶ್ರೀಪತಿ ಹೇರ್ಳೆ ಕಾರ್ಯಕ್ರಮ ನಿರೂಪಿಸಿದರು. ವೈ.ಸದಾರಾಮ ಹೇರ್ಳೆ ವಂದಿಸಿದರು.