ನರೇಂದ್ರ ಕುಮಾರ್ ಅವರಿಗೆ ಪ್ರೊ.ಎಂ.ರಾಮಚಂದ್ರ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.  
ಜಿಲ್ಲೆ

ನರೇಂದ್ರ ಕುಮಾರ್‌ಗೆ ರಾಮಚಂದ್ರ ಸಂಸ್ಮರಣೆ ಪ್ರಶಸ್ತಿ

Karthika K.S

ಕಾರ್ಕಳ: ಸಾಹಿತ್ಯ ಸಂ ಕಾರ್ಕಳದ ಪ್ರವರ್ತಕ ದಿ.ಪ್ರೊ.ರಾಮಚಂದ್ರರ ಸಾಹಿತ್ಯ ಪರಿಚಾರಿಕೆ ಚಿರಸ್ಮರಣೀಯವಾದುದು ಎಂದು ಸಾಹಿತಿ, ವಿಶ್ರಾಂತ ಕನ್ನಡ ಪ್ರಾಧ್ಯಾಪಕ ತಾಳ್ತಜೆ ವಸಂತ ಕುಮಾರ್ ಹೇಳಿದರು.

ಕಾರ್ಕಳ ಅನಂತಶಯನದ ಪ್ರಕಾಶ್ ಸಂಭ್ರಮ ಸಭಾಂಗಣದಲ್ಲಿ ಸಾಹಿತ್ಯ ಸಂದ ಆಶ್ರಯದಲ್ಲಿ ಗುರುವಾರ ಆಯೋಜಿಸಲಾದ ಪ್ರೊ.ಎಂ.ರಾಮಚಂದ್ರ ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ನಿವೃತ್ತ ಪ್ರಾಚಾರ್ಯ, ಪ್ರಗತಿಪರ ಕೃಷಿಕ ಕೆ.ಗುಣಪಾಲ ಕಡಂಬ ವಾತನಾಡಿ ರಾಮಚಂದ್ರರ ಒಡನಾಟ, ಶಿಸ್ತುಬದ್ಧ ಜೀವನ ಅನನ್ಯವಾದುದು ಎಂದರು.

ಕೋಟ ವಿವೇಕ ಬಾಲಕಿಯರ ಪ್ರೌಢಶಾಲೆ ಶಿಕ್ಷಕ ನರೇಂದ್ರ ಕುವಾರ್ ಅವರಿಗೆ ಪ್ರೊ.ಎಂ.ರಾಮಚಂದ್ರ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ವೈ.ಅನಂತಪದ್ಮನಾಭ ಭಟ್ ಕವನ ವಾಚಿಸಿದರು.

ರಾಜೇಶ್ ರೆಂಜಾಳ ಸ್ವಾಗತಿಸಿದರು. ಪ್ರೊ.ಪದ್ಮನಾಭ ಗೌಡ ವಂದಿಸಿದರು. ನಿವೃತ್ತ ಶಿಕ್ಷಕ ಮುನಿರಾಜ ರೆಂಜಾಳ ನಿರೂಪಿಸಿದರು. ಶ್ರುತಿ ಕೆ.ಶಿಂಧೆ ಸಹಕರಿಸಿದರು. ಇತ್ತೀಚೆಗೆ ನಿಧನರಾದ ಕವಿ ಎಚ್.ಎಸ್.ವೆಂಕಟೇಶ ಮೂರ್ತಿ ಅವರಿಗೆ ಸಂತಾಪ ಸೂಚಿಸಲಾಯಿತು.