ಜಿಲ್ಲೆ

ರಾಮ ಮಂದಿರ ಅಮೃತ ಮಹೋತ್ಸವ

ಇಂದಿರಾ ಎನ್ ಕೆ

ಕುಂದಾಪುರ: ಕೋಟೇಶ್ವರದ ರಥಬೀದಿಯಲ್ಲಿನ ಶ್ರೀ ಕೋದಂಡರಾಮ ಮಂದಿರ ಅಮೃತ ಮಹೋತ್ಸವ ಮಾ.30ರಿಂದ ಏ.7ರವರೆಗೆ ನಡೆಯಲಿದೆ ಎಂದು ದೇವಳ ಆಡಳಿತ ಸಮಿತಿ ಅಧ್ಯಕ್ಷ ಕೆ.ಎಸ್.ಸತ್ಯಮೂರ್ತಿ ಹೇಳಿದರು.

ಪ್ರತಿಷ್ಠಾಪನಾ ವರ್ಧಂತಿ ಅಂಗವಾಗಿ ಏ.6ರಂದು ಬ್ರಹ್ಮಕಲಶೋತ್ಸವ, ರಾಮ ಭಜನಾ ಪೂರ್ವಕ ಶ್ರೀ ರಾಮೋತ್ಸವ ನಡೆಯಲಿದೆ. ವಿವಿಧ ಭಜನಾ ತಂಡಗಳಿಂದ ಅಖಂಡ ಭಜನೆ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಶ್ರೀ ರಾಮ ನವಮಿಯಂದು ರಾಮ ರಥದಲ್ಲಿ ಪುರ ಮೆರವಣಿಗೆ ನಡೆಯಲಿದೆ. ರಾಮೋತ್ಸವದ ಸಂದರ್ಭ ಶ್ರೀ ಕಾಣಿಯೂರು ಮಠಾಧೀಶರು ರಥವನ್ನು ಶ್ರಿ ಕೋದಂಡ ರಾಮನಿಗೆ ಸಮರ್ಪಿಸುವರು ಎಂದರು.

ಅಮೃತೋತ್ಸವ ಆಚರಣಾ ಸಮಿತಿ ಪ್ರಧಾನ ಸಂಚಾಲಕ ಎಚ್.ರಾಮಚಂದ್ರ ವರ್ಣ, ದೇವಳ ಸಮಿತಿ ಉಪಾಧ್ಯಕ್ಷ ಜಗದೀಶ್ ರಾವ್, ಕಾರ್ಯದರ್ಶಿ ವೈ.ಎನ್.ವೆಂಕಟೇಶಮೂರ್ತಿ ಭಟ್, ಜತೆ ಕಾರ್ಯದರ್ಶಿ ಕೆ.ಗಜೇಂದ್ರ ಹೆಬ್ಬಾರ್, ಖಜಾಂಚಿ ಬಿ.ಸತ್ಯನಾರಾಯಣ ವರ್ಣ, ತಂತ್ರಿ ನಾಗರಾಜ ಭಟ್, ಗೌತಮ್, ಕಾರ್ಯಕಾರಿ ಸಮಿತಿ ಸದಸ್ಯರಾದ ವಾದಿರಾಜ ಅಡಿಗ, ದೇವೇಂದ್ರ ಬುಧ್ಯ, ವಾದಿರಾಜ ಹೆಬ್ಬಾರ್, ಧ್ರುವ ಪುರಾಣಿಕ, ಸೀತಾರಾಮ ಧನ್ಯ, ಕೃಷ್ಣಮೂರ್ತಿ ಕಡೇಕಾರ್, ನಾಗರಾಜ ಅಡಿಗ, ರಾಮಮೂರ್ತಿ ಪುರಾಣಿಕ ಮೊದಲಾದವರು ಉಪಸ್ಥಿತರಿದ್ದರು.

6ರಂದು ಸೀತಾ-ರಾಮ ಕಲ್ಯಾಣೋತ್ಸವ

ಏ.3ರಂದು ನಾಗದೇವರಿಗೆ ಕಲಾಭಿವೃದ್ಧಿ ಹೋಮ, ಶ್ರೀ ರಾಮ ದೇವರಿಗೆ ಬ್ರಹ್ಮಕಲಶಾಭಿಷೇಕ, ಬೆಳಗ್ಗೆ 9 ಗಂಟೆಗೆ ಸೀತಾ-ರಾಮ ಕಲ್ಯಾಣೋತ್ಸವ, ಶ್ರೀ ಲಕ್ಷ್ಮೀಶೋಭಾನೆ ಪಠಣ. ಶ್ರೀ ರಾಮ ರಕ್ಷಾ ಸ್ತೋತ್ರ ಪಠಣ, ರಾಮರಕ್ಷಾ ಮಂತ್ರ ಹೋಮ, ಮಹಾಪೂಜೆ, ಅನ್ನ ಸಂತರ್ಪಣೆ, ಸಂಜೆ ರಾಮರಥದಲ್ಲಿ ಪುರಮೆರವಣಿಗೆ ನಡೆಯಲಿದೆ.