ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಮಾದಕ ವಸ್ತು ಬಳಸುವ, ಬಳಸಲು ಪ್ರೇರೇಪಿಸುವ, ಸಹಕರಿಸುವ ಕೆಲಸ ಮನುಕುಲಕ್ಕೆ ವಿರುದ್ಧವಾದುದು. ಯುವಜನತೆ ದೇಶದ ಆಸ್ತಿಯಾಗಿದ್ದು, ಮಾದಕ ಚಟಕ್ಕೆ ಬಲಿಯಾಗಬಾರದು ಎಂದು ಮಂಗಳೂರು ವಿ.ವಿ. ಕುಲಪತಿ ಪ್ರೊ.ಪಿ.ಎಲ್.ಧರ್ಮ ಹೇಳಿದರು.
ವ್ಯಾಯಾಮ್ ಕ್ರಾಸ್ ಫಿಟ್ನೆಸ್ ಮತ್ತು ಕ್ರಾಸ್ ಫಿಟ್ ನೇತೃತ್ವದಲ್ಲಿ ಕಾಶಿ ಪ್ಯಾಲೆಸ್, ದಿ ಓಶಿಯನ್ ಪರ್ಲ್, ಬೆಳ್ತಂಗಡಿ ರೋಟರಿ ಕ್ಲಬ್, ಇಂದಿರಾ ನಗರ ರೋಟರಿ, ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್, ರಾಜಾರಾಮ್ ಏಜೆನ್ಸೀಸ್, ಎಸ್ ಡಿಎಂಇ ಸೊಸೈಟಿ, ಎಸ್‌ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಸಂಧ್ಯಾ ಫ್ರೆಶ್, ಇಂಡಿಯನ್ ಡೆಂಟಲ್ ಅಸೋಸಿಯೇಷನ್, ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂ, ಸಿಇಎನ್ ಪೊಲೀಸ್ ಠಾಣೆಯ ಸಹಯೋಗದೊಂದಿಗೆ ವ್ಯಸನ ಮುಕ್ತ ಭಾರತ ಜಾಗೃತಿಗಾಗಿ ಉಜಿರೆಯಲ್ಲಿ ಭಾನುವಾರ ‘ರೈನಾಥನ್’ ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ಸೈಬರ್ ಪೊಲೀಸ್ ಠಾಣೆ ಡಿಎಸ್ಪಿ ಮಂಜುನಾಥ್ ಆರ್.ಜೆ. ಪ್ರತಿಜ್ಞಾವಿಧಿ ಬೋಧಿಸಿದರು. ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಎಸ್‌ಡಿಎಂ ಕಾಲೇಜು ಪ್ರಾಂಶುಪಾಲ ಡಾ.ಪಿ.ವಿಶ್ವನಾಥ್, ಬೆಳ್ತಂಗಡಿ ಸರ್ಕಲ್ ಇನ್‌ಸ್ಪೆಕ್ಟರ್ ಸುಬ್ಬಾಪುರ ಮಠ, ಉಜಿರೆ ಗ್ರಾಪಂ ಅಧ್ಯಕ್ಷೆ ಉಷಾಕಿರಣ ಕಾರಂತ್, ಬದುಕು ಕಟ್ಟೋಣ ಬನ್ನಿ ತಂಡದ ಸಂಸ್ಥಾಪಕ ಮೋಹನ್ ಕುಮಾರ್, ಧಾರ್ಮಿಕ ಮುಖಂಡ ಕಿರಣ್‌ಚಂದ್ರ ಪುಷ್ಪಗಿರಿ, ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ, ಕಾರ್ಯದರ್ಶಿ ಸಂದೇಶ ರಾವ್, ಎಸ್‌ಡಿಎಂ ಕ್ರೀಡಾ ಸಂದ ಕಾರ್ಯದರ್ಶಿ ರಮೇಶ್ ಎಚ್., ವ್ಯಾಯಾಮ ಜಿಮ್‌ನ ಶಿಶಿರ ರುಚಂದ್ರ ಉಪಸ್ಥಿತರಿದ್ದರು. ವಕೀಲ ಧನಂಜಯ ರಾವ್ ನಿರೂಪಿಸಿದರು.