ಕಾರವಾರ: ಜಿಲ್ಲೆಯಲ್ಲಿ ನಾಲ್ಕು ತಿಂಗಳ ನಂತರವೂ ಮಳೆಯ ಅಬ್ಬರ ಮುಂದುವರಿದಿರುವುದು ಕೃಷಿಕರನ್ನು ಆತಂಕಕ್ಕೀಡುಮಾಡಿದೆ. ಜೂನ್‌ನಿಂದ ಶುರುವಾಗುವ ಮಳೆಗಾಲ ಸೆಪ್ಟೆಂಬರ್ ಅಂತ್ಯಕ್ಕೆಲ್ಲ ಕಡಿಮೆಯಾಗಿಬಿಡುತ್ತದೆ. ಅಕ್ಟೋಬರ್‌ನಲ್ಲಿ ಆಗೊಮ್ಮೆ ಈಗೊಮ್ಮೆ ಮಳೆ ಬಂದು ಹೋಗುವುದು ವಾಡಿಕೆ. ಆದರೆ, ಈ ಬಾರಿ ಅಕ್ಟೋಬರ್ 15 ರ ನಂತರವೂ ವರುಣನ ಅಬ್ಬರ ಕಡಿಮೆಯಾಗಿಲ್ಲ. ಈ ವಾರವೂ ಮಳೆ ಮುಂದುವರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಅಕ್ಟೋಬರ್ 19 ರವರೆಗೆ ಯೆಲ್ಲೋ ಅಲರ್ಟ್ ನೀಡಲಾಗಿದ್ದು, ಅಲ್ಲಲ್ಲಿ 115 ಮಿಮೀ ವರೆಗೂ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
ಮಂಗಳವಾರ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಗೋಕರ್ಣ, ಶಿರಸಿ ಸೇರಿ ವಿವಿಧೆಡೆ ಭಾರಿ ಸಿಡಿಲು, ಗುಡುಗು ಗಾಳಿ ಸಮೇತ ಅಬ್ಬರದ ಮಳೆಯಾಯಿತು.ಮಂಗಳವಾರ ಬೆಳಗಿನ ವರದಿಯಂತೆ ಹಿಂದಿನ 24 ಗಂಟೆಗಳ ಅವಽಯಲ್ಲಿ ಅಂಕೋಲಾ-11.3, ಭಟ್ಕಳ-16.9, ಕಾರವಾರ ಮತ್ತು ಕುಮಟಾ ತಲಾ-5.4 ಮಿಮೀ ಮಳೆಯಾಗಿದೆ. ಉಳಿದ ತಾಲೂಕುಗಳಲ್ಲಿ 5 ಮಿಮೀಗಿಂತ ಕಡಿಮೆ ಮಳೆಯಾಗಿದೆ. ಹಿಂದಿನ ಏಳು ದಿನಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 81.4 ಮಿಮೀ ಮಳೆಯಾಗಿದೆ. ಇದು ವಾಡಿಕೆಗಿಂತ ಶೇ.170 ರಷ್ಟು ಜಾಸ್ತಿಯಾದಂತಾಗಿದೆ.
ಮಳೆ ಭರಪೂರ:
ಈ ಬಾರಿ ಜಿಲ್ಲೆಯಲ್ಲಿ ಭರಪೂರ ಮಳೆಯಾಗಿದೆ. ಜಿಲ್ಲೆಯಲ್ಲಿ ಜೂನ್ 1 ರಿಂದ ಅಕ್ಟೋಬರ್ 15 ರವರೆಗೆ 2840 ಮಿಮೀ ಮಳೆಯಾಗುವ ವಾಡಿಕೆ ಇದೆ. ಆದರೆ, ಈ ವರ್ಷ 3728 ಮಿಮೀ ಮಳೆಯಾಗಿದೆ. ಎಂದರೆ ವಾಡಿಕೆಗಿಂತ ಶೇ. 31 ರಷ್ಟು ಹೆಚ್ಚುವರಿ ಮಳೆಯಾಗಿದೆ. ಶಿರಸಿಯಲ್ಲಿ ವಾಡಿಕೆಗಿಂದ ಶೇ.61 ರಷ್ಟು ಹೆಚ್ಚುವರಿ, ಸಿದ್ದಾಪುರ ಶೇ.58, ಕಾರವಾರ ಶೇ.55, ಭಟ್ಕಳ 50 ಮಿಮೀ ಮಳೆಯಾಗಿದೆ. ಮಳೆಯಿಂದ ಜಿಲ್ಲೆಯಲ್ಲಿ 100 ಕೋಟಿಗೂ ಅಽಕ ಸಾರ್ವಜನಿಕ ಆಸ್ತಿಗಳಿಗೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ಕೃಷಿಕರಿಗೆ ಆತಂಕ:
ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ 3875 ರಷ್ಟು ರೈತರ 981.198 ಹೆಕ್ಟೇರ್‌ನಷ್ಟು ಕೃಷಿ ಹಾಗೂ 68.62 ರಷ್ಟು ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ ಎಂದು ಜಿಲ್ಲಾಡಳಿತ ಲೆಕ್ಕ ಹಾಕಿದೆ. ಅದಕ್ಕೆ ಪರಿಹಾರ ವಿತರಿಸುವ ಸಂಬAಧ ಕೃಷಿ ಹಾಗೂ ಕಂದಾಯ ಇಲಾಖೆ ಅಽಕಾರಿಗಳು ಜಂಟಿ ಸಮೀಕ್ಷೆಯನ್ನು ಮುಗಿಸಿದ್ದು, ಪರಿಹಾರ ತಂತ್ರಾAಶದಲ್ಲಿ ಅಳವಡಿಸುವ ಕಾರ್ಯ ನಡೆಸಿದ್ದಾರೆ. ಇವಿಷ್ಟು ಸರ್ಕಾರಿ ದಾಖಲೆಗಳಾದರೆ ಇದರ ಹೊರತಾಗಿಯೂ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಈಗ ಮತ್ತೆ ಮಳೆ ಮುಂದುವರಿದಿರುವುದರಿAದ ಮತ್ತಷ್ಟು ಹಾನಿಯ ಆತಂಕ ರೈತರದ್ದಾಗಿದೆ.
ಭತ್ತದ ಬೆಳೆ ಈಗಾಗಲೇ ಹೊಡೆ ಕಟ್ಟಿದ್ದು, ಪೈರು ಮಾಗುವ ಹಂತಕ್ಕೆ ತಲುಪಿದೆ. ಈಗ ಅವಽ ಮುಗಿದ ಮೇಲೂ ಮಳೆಯಾಗುತ್ತಿರುವುದರಿಂದ ಪೈರಿಗೆ ನೀರು ಸಿಲುಕಿ ಇಳುವರಿ ನಷ್ಟವಾಗುವ ಆತಂಕ ಎದುರಾಗಿದೆ. ಅತಿವೃಷ್ಟಿಯಿಂದ ಈ ಬಾರಿ ಎಲ್ಲೆಡೆ ಅಡಕೆಗೆ ಕೊಳೆ ರೋಗ ವ್ಯಾಪಿಸಿದೆ. ಜತೆಗೆ ಎಲೆ ಚುಕ್ಕಿ ರೋಗವೂ ಕಾಣಿಸಿಕೊಳ್ಳುತ್ತಿದೆ. ಮರಗಳು ಸಾಯುತ್ತಿವೆ. ಮಳೆ ಕಡಿಮೆಯಾದಲ್ಲಿ ರೋಗ ನಿಯಂತ್ರಣಕ್ಕೆ ಬಂದೀತು ಎಂದು ರೈತರ ಆಸೆ ಆದರೆ, ಅಕ್ಟೋಬರ್ ನಂತರವೂ ಮಳೆ ಮುಂದುವರಿದಿರುವುದು ಆತಂಕ ಉಂಟು ಮಾಡಿದೆ ಎನ್ನುತ್ತಾರೆ ಸಿದ್ದಾಪುರದ ರೈತ ವಿಶ್ವನಾಥ ಹೆಗಡೆ.
ಅತಿವೃಷ್ಟಿಯಿಂದ ಉಂಟಾದ ಬೆಳೆ ಹಾನಿ ಸಮೀಕ್ಷೆ ಮುಕ್ತಾಯವಾಗಿ, ಪರಿಹಾರ ತಂತ್ರಾAಶದಲ್ಲಿ ಅಳವಡಿಸಲಾಗಿದೆ. ಸರ್ಕಾರದಿಂದಿ ರೈತರ ಖಾತೆಗಳಿಗೆ ನೇರವಾಗಿ ಪರಿಹಾರದ ಹಣ ಜಮಾ ಆಗಲಿದೆ. ಜಿಲ್ಲೆಯಲ್ಲಿ ವಿಪತ್ತು ನಿರ್ವಹಣೆ ಹೆಚ್ಚುವರಿ ಅನುದಾನಕ್ಕಾಗಿ 49.93 ಕೋಟಿ ರೂ. ಪ್ರಸ್ತಾವನೆಯನ್ನು ಕಳಿಸಲಾಗಿದೆ.ಕೆ.ಲಕ್ಷ್ಮೀಪ್ರಿಯಾ ಜಿಲ್ಲಾಧಿಕಾರಿ, ಉತ್ತರ ಕನ್ನಡ