ನೆಲ್ಯಾಡಿ: ಇಚ್ಲಂಪಾಡಿ ಗ್ರಾಮದ ಲಾವತಡ್ಕ ಎಂಬಲ್ಲಿ ಬುಧವಾರ ರಾತ್ರಿ ಗಾಳಿ ಮಳೆಗೆ ತೋಟದ ಶೆಡ್‌ನ ಶೀಟ್ ಹಾರಿ ಹೋಗಿ ಗೋಡೆ ಕುಸಿದು ಬಿದ್ದಿದೆ. ಜೋಸೆಫ್ ಎಂಬುವರ ಶೆಡ್ ಇದಾಗಿದ್ದು. ಒಳಗಡೆ ಯಾರೂ ಇಲ್ಲದ ಕಾರಣ ಯಾವುದೇ ಅಪಾಯ ಸಂಭವಿಸಲಿಲ್ಲ.
ಗೋಳಿತ್ತೊಟ್ಟು ಗ್ರಾಮದ ಕಲ್ಲಡ್ಕದಲ್ಲಿ ಬುಧವಾರ ರಾತ್ರಿ ಭಾರಿ ಮಳೆಗೆ ದರೆ ಜರಿದು ಮಣ್ಣು ಮನೆಯ ಗೋಡೆಗೆ ಬಿದ್ದ ಪರಿಣಾಮ ಗೋಡೆ ಬಿರುಕು ಬಿಟ್ಟು ಹಾನಿಯಾಗಿದೆ.
ಕಲ್ಲಡ್ಕ ನಿವಾಸಿ ಸೇಸಪ್ಪ ಗೌಡರ ಅವರ ಮನೆ ಸಮೀಪದ ದರೆ ಭಾರಿ ಮಳೆಗೆ ಕುಸಿದಿದೆ. ಇದರ ಮಣ್ಣು ಮನೆಯ ಗೋಡೆಗೆ ಬಿದ್ದು, ಗೋಡೆ ಬಿರುಕು ಬಿಟ್ಟಿದೆ. ಸೇಸಪ್ಪ ಗೌಡ ಹಾಗೂ ಮನೆಯವರು ಅಪಾಯದಿಂದ ಪಾರಾಗಿದ್ದಾರೆ.