ಆವರಣಗೋಡೆ ಕುಸಿದು ಬಿದ್ದು ಕಾರು ಸಂಪೂರ್ಣ ಜಖಂಗೊಂಡಿದೆ. 
ಜಿಲ್ಲೆ

ಆವರಣಗೋಡೆ ಕುಸಿದುಬಿದ್ದು ಕಾರಿಗೆ ಜಖಂ

ಸೌಮ್ಯ ಆರ್

ಕಾಸರಗೋಡು: ಬಿರುಸಿನ ಮಳೆಗೆ ನಗರದ ನೆಲ್ಲಿಕುನ್ನು ಮುಹಿಯುದ್ದೀನ್ ಜುಮಾ ಮಸೀದಿ ರಸ್ತೆ ನಿವಾಸಿಯ ಮನೆ ಆವರಣಗೋಡೆ ಕುಸಿದುಬಿದ್ದು ಸನಿಹ ನಿಲ್ಲಿಸಲಾಗಿದ್ದ ಕಾರು ಸಂಪೂರ್ಣ ಜಖಂಗೊಂಡಿದೆ. ನೆಲ್ಲಿಕುನ್ನು ನಿವಾಸಿ ಸಮೀರ್ ಎಂಬುವರ ಕಾರು ಇದಾಗಿದೆ. ಶುಕ್ರವಾರದ ಪ್ರಾರ್ಥನೆಗಾಗಿ ಕಾರನ್ನು ಮಮ್ಮುಞಿಹಸೈನಾರ್ ಎಂಬುವರ ಮನೆ ಸನಿಹದ ಆವರಣಗೋಡೆ ಬಳಿ ನಿಲ್ಲಿಸಿ ಮಸೀದಿಗೆ ತೆರಳಿದ್ದ ಸಂದರ್ಭ ಅಪಘಾತ ಸಂಭವಿಸಿದೆ. ಆವರಣಗೋಡೆ ಕುಸಿತದಿಂದ ಮಮ್ಮುಞಿಹಸೈನಾರ್ ಅವರ ಮನೆಯ ಒಂದು ಪಾರ್ಶ್ವ ಬಿರುಕು ಬಿಟ್ಟಿದೆ.