ಕಾರಟಗಿಯಿಂದ ಸಿಂಧನೂರು ನಗರದ ರೈಲ್ವೆ ನಿಲ್ದಾಣದವರೆಗೆ ಸೋಮವಾರ ಪರೀಕ್ಷಾರ್ಥ ರೈಲ್ವೆ ಸಂಚಾರ ನಡೆಸಲಾಯಿತು. 
ಜಿಲ್ಲೆ

ರೈಲ್ವೆ ಅಧಿಕಾರಿಗಳಿಂದ ಸಂಚಾರ ಪರಿಶೀಲನೆ

ಸಿಂಧನೂರು: ಕಾರಟಗಿಯಿಂದ ಸಿಂಧನೂರು ನಗರದ ರೈಲ್ವೆ ನಿಲ್ದಾಣದವರೆಗೆ ನಡೆದ ಪರೀಕ್ಷಾರ್ಥ ರೈಲ್ವೆ ಸಂಚಾರ ಸೋಮವಾರ ಯಶಸ್ವಿಯಾಯಿತು.

ಸಂಜೆ 5ಗಂಟೆಗೆ ಸಣ್ಣ ಬೋಗಿಯ ರೈಲು ಸಂಚಾರ ಆರಂಭಿಸಲಾಯಿತು. 120 ಕಿಮೀ ವೇಗದಲ್ಲಿ 3ಬೋಗಿ ಒಳಗೊಂಡ ರೈಲ್ವೆ ಇಂಜಿನ್‌ನನ್ನು ಎರಡು ಬಾರಿ ಪರಿಕ್ಷಿಸಲಾಯಿತು.

ಗರಿಷ್ಠ ವೇಗ ಮಿತಿಯೊಂದಿಗೆ ರೈಲು ಸಂಚಾರ ನಡೆಸಿದ ಅಧಿಕಾರಿಗಳು, ರೈಲ್ವೆ ಟ್ರಾೃಕ್ ಸಂಬಂಧಿತ ಕಾಮಗಾರಿಗಳ ಭದ್ರತೆ, ನಿಲ್ದಾಣಗಳನ್ನು ಪರಿಶೀಲಿಸಿದರು. ಸುಮಾರು 14 ಕಿಮೀ ರೈಲು ಸಂಚಾರ ಕೈಗೊಂಡು ಸಣ್ಣಪುಟ್ಟ ದೋಷ ಕಂಡುಕೊಳ್ಳಲಾಯಿತು.