More

    ರೈಲ್ವೆ ಮಾರ್ಗ ಬದಲಾಯಿಸದಿರಲು ಮನವಿ

    ರಟ್ಟಿಹಳ್ಳಿ: ಪಟ್ಟಣದಲ್ಲಿ ರೈಲ್ವೆ ಮಾರ್ಗವನ್ನು ಯಾವುದೇ ಕಾರಣಕ್ಕೂ ಬದಲಾಯಿ ಬಾರದು ಎಂದು ರೈತರು ಉಪ ತಹಸೀಲ್ದಾರ್ ಬಸವರಾಜ ಕಟ್ಟೀಮನಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
    ರೈತ ವೀರಣ್ಣ ಬೆನ್ನೂರ ಮಾತನಾಡಿ, ಜ. 29ರಂದು ಪಟ್ಟಣದಲ್ಲಿ ನಡೆಸಿದ ಪ್ರತಿಭಟನೆ ರೈಲ್ವೆ ಇಲಾಖೆ ನಡೆಸಿದ ಸರ್ವೇ ವಿರುದ್ಧವಾಗಿದೆ. ಜ. 30ರಂದು ಉಪವಿಭಾಗಾಧಿಕಾರಿಗಳು ಮತ್ತು ರೈಲ್ವೆ ಇಂಜಿನಿಯರ್ ಸ್ಥಳ ಪರಿಶೀಲಿಸಿ ಡಿಪಿಆರ್ ಬದಲಾಗಿ ಸುಮಾರು 100 ರಿಂದ 200 ಮೀಟರ್ ಸ್ಥಳ ಬದಲಾವಣೆ ಮಾಡುವುದಾಗಿ ಹೇಳಿಕೆ ನೀಡಿದ್ದಾರೆ. ಈಗಾಗಲೇ ಡಿಪಿಆರ್ ಪೂರ್ಣಗೊಳಿಸಿ ಸ್ವೀಕಾರವಾಗಿರುವ ಮಾರ್ಗ ಹೊರತುಪಡಿಸಿ ಬದಲಾವಣೆ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಭಾಗದಲ್ಲಿನ ರೈತರು ಈಗಾಗಲೇ ತುಂಗಾ ಮೇಲ್ದಂಡೆ ಯೋಜನೆಗೆ ಭೂಮಿಯನ್ನು ಕಳೆದು ಕೊಂಡು ಸಂಕಷ್ಟದಲ್ಲಿದ್ದಾರೆ. ಸದರಿ ಮಾರ್ಗವನ್ನು ಯಾವುದೇ ಕಾರಣಕ್ಕೂ ಬದಲಾಯಿಸದೇ ಉರ್ಜಿತವಾದ ಮಾರ್ಗದಲ್ಲಿಯೇ ರೈಲ್ವೆ ಮಾರ್ಗ ಮಾಡಬೇಕು. ಸ್ಥಳ ಬದಲಾಯಿಸಿದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ರೈತರಾದ ಹನುಮಂತಪ್ಪ ಗೋಣೆಪ್ಪನವರ, ವಿಜಯ ನಾಯಕ, ಸಿದ್ದಪ್ಪ ಕಟ್ಟೇಕಾರ, ವೀರೇಶ ಬಣಕಾರ, ಸಿದ್ದಪ್ಪ ಮಳಗೊಂಡರ, ಕಿರಣ ವಾಲ್ಮೀಕಿ, ಷಣ್ಮುಖ ಮಳಗೊಂಡರ, ಸಿದ್ದು ಮುದಿವೀರಣ್ಣನವರ, ಇಬ್ರಾಹಿಂ ಸುಂಕದ, ಜಬೀವುಲ್ಲಾ ಗೋಡಿಹಾಳ, ಜಗದೀಶ ಸಾಮ್ನೇಕಾರ, ಮನೋಜ ಗೋಣೆಪ್ಪನವರ, ಕೆಂಚಪ್ಪ ಕಟ್ಟೇಕಾರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts