ಜಿಲ್ಲೆ

ಸೆ.22ಕ್ಕೆ ನಿವೃತ್ತ ಪಿಂಚಣಿದಾರರ ಸಮಾವೇಶ

Gangavati - Shashidhara Shashidhara

ರಾಯಚೂರು: ಇಪಿಎಸ್-95 ಭವಿಷ್ಯ ನಿಧಿ ನಿವೃತ್ತ ಪಿಂಚಣಿದಾರರ ಸಮನ್ವಯ ಸಮಿತಿ ವತಿಯಿಂದ ಸರ್ವ ಸದಸ್ಯರ ವಾರ್ಷಿಕ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಗೌರವಾಧ್ಯಕ್ಷ ಎ.ವೀರಭದ್ರಪ್ಪ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಸೆ.22ರಂದು ನಗರದ ಕನ್ನಡ ಭವನದಲ್ಲಿ ಸಮಿತಿಯ ವಾರ್ಷಿಕ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು ಸಮಾವೇಶದಲ್ಲಿ ಪಿಂಚಣಿ ಹೆಚ್ಚಳ, ವೈದ್ಯಕೀಯ ಸೇವೆ ಸೇರಿದಂತೆ ಇನ್ನಿತರ ಸೌಲಭ್ಯಗಳ ಕುರಿತು ಚರ್ಚೆಗಳು ನಡೆಯಲಿವೆ ಎಂದರು.

ಸಮಾವೇಶದ ಉದ್ಘಾಟನೆಯನ್ನು ಎನ್‌ಎಸಿ ರಾಷ್ಟ್ರೀಯ ಸಂಯೋಜಕ ರಮಾಕಾಂತ್ ನರಗುಂದ ನೆರವೇರಿಸಲಿದ್ದು, ಉಪಾಧ್ಯಕ್ಷ ವೀರಕುಮಾರ ಗಡದ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಸ್ವಾಮಿ, ಗೌರವ ಸದಸ್ಯ ಅನಿಲಕುಮಾರ ಇನಾಮ್‌ದಾರ್ ಉಪಸ್ಥಿತರಿದಲಿದ್ದಾರೆ.

ಸಮಾವೇಶದ ಅಧ್ಯಕ್ಷತೆಯನ್ನು ವೀರಭದ್ರಯ್ಯ ಸ್ವಾಮಿ ಹಸಮಕಲ್ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ದಸ್ತಗಿರಿ ಸಾಬ್, ಚಂದ್ರಕಾಂತ್, ವೀರಭದ್ರಯ್ಯ, ವೀರೇಶಬಾಬು, ಪರಶುರಾಮ ಸೇರಿದಂತೆ ಇತರರಿದ್ದರು.