ಜಿಲ್ಲೆ

ಮಡಿವಾಳ ಸಮಾಜ ಮಹಿಳಾ ಘಟಕದಿಂದ ಆಧ್ಯಾತ್ಮಿಕ ಉಪನ್ಯಾಸ: ಅಶ್ವಿನಿ

ರಾಯಚೂರು: ಮಡಿವಾಳ ಸಮಾಜ ಮಹಿಳಾ ಘಟಕದಿಂದ ಶ್ರಾವಣ ಮಾಸದ ಕೊನೆಯ ಸೋಮವಾರದ ಅಂಗವಾಗಿ ಆಧ್ಯಾತ್ಮಿಕ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಘಟಕದ ಪ್ರಧಾನ ಕಾರ್ಯದರ್ಶಿ ಅಶ್ವಿನಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಸೆ.2ರಂದು ಶ್ರಾವಣ ಮಾಸದ ಅಂಗವಾಗಿ ನಗರದ ಮಡಿವಾಳ ಸಮುದಾಯ ಭವನದಲ್ಲಿ ಆದ್ಯಾತ್ಮಿಕ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಉಪನ್ಯಾಸವನ್ನು ಜೀವನ ಕೌಶಲ್ಯ ತರಬೇತುದಾರ ಜೆ.ಎಸ್ ರಾಜಶೇಖರ ನೀಡಲಿದ್ದಾರೆ ಎಂದು ತಿಳಿಸಿದರು.

ಜತೆಗೆ ಮಡಿವಾಳ ಸಮಾಜದ ಮಹಿಳೆಯರಿಗೆ ಹುಡಿ ತುಂಬುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಬೇಕೆಂದು ಅಶ್ವಿನಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಜಮುನಾ, ರೂಪಾ, ಈರಮ್ಮ, ಪದ್ಮಾವತಿ ಸೇರಿದಂತೆ ಇತರರಿದ್ದರು.