ರಾಯಚೂರು: ಜಿಲ್ಲಾ ಹಾಪ್ ಕಾಮ್ಸ್ ರೈತರಿಂದ ನೇರ ಖರೀದಿ ಮಾಡಿ ಗ್ರಾಹಕರಿಗೆ ತರಕಾರಿ ಹಣ್ಣು ಹಂಪಲುಗಳನ್ನು ಮನೆ ಬಾಗಿಲುಗೆ ಮುಟ್ಟಿಸುವುದು ಹಾಪ್ ಕಾಮ್ಸ್ ನ ಉದ್ದೇಶವಾಗಿದೆ ಎಂದು ಹಾಪ್ ಕಾಮ್ಸ್ ಅಧ್ಯಕ್ಷ ನಾಗನಗೌಡ ಹೇಳಿದರು.
ನಗರದ ಜಿಲ್ಲಾ ತೋಟಗಾರಿಕೆ ಬೆಳೆಗಾರರ ಉತ್ಪನ್ನಗಳ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸಭೆಯಲ್ಲಿ ಶುಕ್ರವಾರ ಮಾತನಾಡಿದರು.
ಜಿಲ್ಲಾ ಹಾಪ್ ಕಾಮ್ಸ್ ವತಿಯಿಂದ ಹವಾ ನಿಯಂತ್ರಿತ ವಾಹನಗಳ ಮೂಲಕ ರೈತರು ಬೆಳೆದ ತರಕಾರಿ, ಹಣ್ಣುಗಳನ್ನು ಜಿಲ್ಲೆಯ ಗ್ರಾಹಕರಿಗೆ ಮನೆ ಬಾಗಿಲಿಗೆ ಮುಟ್ಟಿಸುವ ವ್ಯವಸ್ಥೆ ಮಾಡಲಾಗುವುದು. ಹಾಪ್ ಕಾಮ್ಸ್ ರೈತರ ಹಾಗೂ ಗ್ರಾಹಕರ ಕೊಂಡಿಯಾಗಿ ಸೇವೆ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ರಿಮ್ಸ್ ಆಸ್ಪತ್ರೆ ಆವರಣದಲ್ಲಿ ಹೈಟಕ್ ಮಾರಾಟ ಮಳಿಗೆಯನ್ನು ಮಾಡುವ ಉದ್ದೇಶವಿದೆ ಎಂದರು.
ಈ ಸಂದರ್ಭದಲ್ಲಿ ಹಾಪ್ ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಜಿತೇಂದ್ರಕುಮಾರ, ಆಡಳಿತ ಮಂಡಳಿ ನಿರ್ದೇಶಕರಾದ ವಿಶ್ವನಾಥರೆಡ್ಡಿ, ಶಂಕರ ರೆಡ್ಡಿ, ಪಂಪನಗೌಡ, ಶಶಿರಾಜ ಮಸ್ಕಿ, ಲಚ್ಚಪ್ಪನಾಯಕ, ಹನುಮಂತು ಸೇರಿದಂತೆ ಇತರರಿದ್ದರು.