ರಾಯಚೂರಿನ ಡಿಸಿ ಕಚೇರಿ ಎದುರು ದೇವದಾಸಿ‌ ಮಹಿಳಾ ವಿಮೋಚನಾ ಸಂಘದಿಂದ ಕಚೇರಿಯ ಸ್ಥಾನಿಕ ಅಧಿಕಾರಿ ಪರಶುರಾಮಗೆ ಮನವಿ ಪತ್ರ ಸಲ್ಲಿಸುತ್ತಿರುವುದು. ಈ ಸಂದರ್ಭದಲ್ಲಿ ಪ್ರಮುಖರಾದ ಹೆಚ್.ಪದ್ಮಾ, ಪರಶುರಾಮ, ಹುಲಿಗೆಮ್ಮ, ಕೆ.ಜಿ ವೀರೇಶ ಸೇರಿದಂತೆ ಇತರರಿದ್ದರು. 
ಜಿಲ್ಲೆ

ಮಾಜಿ ದೇವದಾಸಿಯರಿಗೆ ನಿವೇಶ ನೀಡುವಂತೆ ಒತ್ತಾಯ

Gangavati - Shashidhara Shashidhara

ರಾಯಚೂರು: ಮುದಗಲ್ ಪುರಸಭೆ ವ್ಯಾಪ್ತಿಯಲ್ಲಿ ಮಾಜಿ ದೇವದಾಸಿ ಮಹಿಳೆಯರಿಗೆ ನಿವೇಶನ ಮಂಜೂರು ಮಾಡಿ ಹಕ್ಕುಪತ್ರ ನೀಡುವಂತೆ ಕರ್ನಾಟಕ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ನಗರದ ಡಿಸಿ ಕಚೇರಿ ಎದುರು ಕಚೇರಿಯ ಸ್ಥಾನಿಕ ಅಧಿಕಾರಿ ಪರಶುರಾಮಗೆ ಶುಕ್ರವಾರ ಸಲ್ಲಿಸಲಾಯಿತು.

ಲಿಂಗಸುಗೂರು ತಾಲೂಕಿನ ಮುದಗಲ್ ಪುರಸಭೆ ವ್ಯಾಪ್ತಿಯ ವಾರ್ಡ್ ನಂ.16ರಲ್ಲಿ 15ಜನ ಮಾಜಿ ದೇವದಾಸಿ ಮಹಿಳೆಯರಿಗೆ ನಿವೇಶನ ಒದಗಿಸುವಂತೆ ನಿರಂತರವಾಗಿ ಹೋರಾಟ ನಡೆಯುತ್ತಿದ್ದು, ಮುದಗಲ್ ಪುರಸಭೆ ಸರ್ವ ಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಲಾಗಿದೆ. ಮಾಜಿ ದೇವದಾಸಿಯರಿಗೆ ನಿವೇಶ ಒದಗಿಸಲು ನಿವೇಶನ ನಕಾಶೆಯ ಜತೆಗೆ ಅನುಮೋದಿಸಿ ಮಂಜೂರಾತಿಗೆ ಶಿಫಾರಸ್ಸು ನೀಡಲಾಗಿದೆ ನಿವೇಶನ ಒದಗಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಒತ್ತಾಯಿಸಲಾಯಿತು.

ಏಳು ವರ್ಷಗಳು ಗತಿಸಿದರೂ ಇನ್ನೂ ಕೂಡ ಮಾಜಿ ದೇವದಾಸಿಯರಿಗೆ ನಿವೇಶನ ಒದಗಿಸಲು ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಫಲಾನುಭವಿಗಳಿಗೆ ಸಂಕಷ್ಟ ಎದುರಾಗುತ್ತಿರುವುದರ ಜತೆಗೆ ಮಾಜಿ ದೇವದಾಸಿಯರಿಗಾಗಿ ನಿಗದಿಪಡಿಸಲಾದ ಸ್ಥಳವನ್ನು ಒತ್ತುವರಿ ಮಾಡಿಕೊಳ್ಳಲಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಹೆಚ್.ಪದ್ಮಾ, ಪರಶುರಾಮ, ಹುಲಿಗೆಮ್ಮ, ಕೆ.ಜಿ ವೀರೇಶ ಸೇರಿದಂತೆ ಇತರರಿದ್ದರು.