ರಾಯಚೂರಿನ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ದರ್ವೇಶ್ ಸಮುದಾಯವನ್ನು ಬಳಸಿಕೊಂಡು ವಂಚನೆ ಮಾಡಿರುವ ಕಂಪನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದರ್ವೇಶ್ ಸಮುದಾಯದಿಂದ ಪ್ರತಿಭಟನೆ ನಡೆಸಲಾಯಿತು.  
ಜಿಲ್ಲೆ

ಹೆಸರು ದುರ್ಬಳಕೆ ಖಂಡಿಸಿ ದರ್ವೇಶ್ ಸಮುದಾಯದಿಂದ ಪ್ರತಿಭಟನೆ

Gangavati - Shashidhara Shashidhara

ರಾಯಚೂರು: ಜನರಿಂದ ಹಣ ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡಿದ ಖಾಸಗಿ ಕಂಪನಿಗೆ ಸಮುದಾಯದ ಹೆಸರನ್ನು ಇಟ್ಟಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ದರ್ವೇಶ್ ಒಬಿಸಿ ಅಲೆಮಾರಿಗಳ ಸಂಘ ಜಿಲ್ಲಾ ಘಟಕದಿಂದ ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಇಸ್ಲಾಂ ಧರ್ಮದ ಉಪಜಾತಿಯಾಗಿರುವ ದರ್ವೇಶ್ ಸಮುದಾಯದ ಹೆಸರನ್ನು ಕಂಪನಿಗೆ ಇಟ್ಟುಕೊಂಡು ಜನರಿಗೆ ವಂಚನೆ ಮಾಡುತ್ತಿರುವುದರಿಂದ ಸಮುದಾಯದ ಹೆಸರಿಗೆ ಮಸಿ ಬಳಿದಂತಾಗಿದ್ದು, ಸಮುದಾಯದ ಹೆಸರನ್ನು ದುರ್ಬಳಕೆ ಮಾಡಿಕೊಂಡಿರುವುದು ಖಂಡನೀಯ. ಇದರಿಂದ ಸಮಾಜದಲ್ಲಿ ದರ್ವೇಶ್ ಸಮುದಾಯವನ್ನು ಕೀಳು ಮಟ್ಟದಲ್ಲಿ ನೋಡಲಾಗುತ್ತಿದೆ.

ಕೂಡಲೇ ಸಮುದಾಯದ ಹೆಸರನ್ನು ಬಳಸಿ ವಂಚನೆ ಮಾಡಿರುವ ಕಂಪನಿಯ ಪಾಲುದಾರರ ವಿರುದ್ಧ ಮಾನದಷ್ಠ ಮೊಕದ್ದಮೆ ದಾಖಲಿಸಿ, ಆರೋಪಿಗಳನ್ನು ಬಂಧಿಸಿ ಅವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಮಹ್ಮದ್ ಅಲಿ, ಚಾಂದ್ ಪಾಷಾ, ಮಹ್ಮದ್ ಹುಸೇನ್, ಮಹೆಬೂಬ್, ಜಮಲ್ ಸಾಬ್, ಮೌಲಾಸಾಬ್, ಫಕ್ರುದ್ದಿನ್, ನೋರ್ ಮಹ್ಮದ್, ಶಾಲಂ, ಮಹ್ಮದ್ ಹುಸೇನ್, ಖಲೀಲ್ ಸೇರಿದಂತೆ ಇತರರಿದ್ದರು.