ಮಹ್ಮದ್ ಅಲಿ 
ಜಿಲ್ಲೆ

ದರ್ವೇಶ್ ಸಮುದಾಯದ ಹೆಸರು ದುರ್ಬಳಕೆ: ಕಂಪನಿ ವಿರುದ್ಧ ಆ.7ಕ್ಕೆ ದೂರು ಸಲ್ಲಿಕೆ: ಮಹ್ಮದ್ ಅಲಿ

Gangavati - Shashidhara Shashidhara

ರಾಯಚೂರು: ಹಣ ಹೂಡಿಕೆ ಮಾಡಿಸಿಕೊಂಡು ಜನರಿಗೆ ವಂಚನೆ ಮಾಡಿರುವ ಖಾಸಗಿ ಕಂಪನಿಗೆ ದರ್ವೇಶ್ ಎಂಬ ಸಮುದಾಯದ ಹೆಸರನ್ನು ಬಳಸಿಕೊಂಡಿರುವುದು ಖಂಡನೀಯ ಎಂದು ರಾಜ್ಯ ದರ್ವೇಶ್ ಒಬಿಸಿ ಅಲೆಮಾರಿಗಳ ಸಂಘದ ಜಿಲ್ಲಾಧ್ಯಕ್ಷ ಮಹ್ಮದ್ ಅಲಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ದರ್ವೇಶ್ ಎಂಬ ಪದವು ಅಲೆಮಾರಿಗಳ ಸಮುದಾಯವಾಗಿದೆ. ಬಿಕ್ಷಾಟನೆ ಮಾಡಿ, ದೇವರ ಹಾಡುಗಳನ್ನಾಡುತ್ತಾ ಬದುಕನ್ನು ನಡೆಸುತ್ತಿರುವ ಸಮುದಾಯವಾಗಿದೆ ಇಂತಹ ಸಮುದಾಯದ ಹೆಸರನ್ನು ವಂಚನೆ ಮಾಡುವ ಉದ್ದೇಶದಿಂದ ಕಂಪನಿಗೆ ಇಟ್ಟು ಹೆಸರು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ದೂರಿದರು.

ಈ ಬಗ್ಗೆ ಆ.7ರಂದು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು. ಮತ್ತು ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಚಾಂದ್‌ಪಾಷಾ, ಮೌಲಾಸಾಬ್, ಜಮೀರ್, ಕುರುದ್ದೀನ್, ಅಹ್ಮದುಲ್ಲಾ ಷಾ ಸೇರಿದಂತೆ ಇತರರಿದ್ದರು.