ಕಾಸರಗೋಡು: ಪುತ್ತಿಗೆ ಪಂಚಾಯಿತಿ ಅಂಗಡಿಮೊಗರು ಶಾಲೆಯ ಪ್ಲಸ್‌ವನ್ ತರಗತಿ ವಿದ್ಯಾರ್ಥಿಯನ್ನು ರ‌್ಯಾಗಿಂಗ್ ನಡೆಸಿದ ಐವರು ಪ್ಲಸ್‌ಟು ವಿದ್ಯಾರ್ಥಿಗಳ ವಿರುದ್ಧ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಶಾಲಾ ಪ್ರಾಂಶುಪಾಲೆ ರಾಜಲಕ್ಷ್ಮೀ ಅವರ ದೂರಿನ ಮೇರೆಗೆ ಈ ಕೇಸು ದಾಖಲಾಗಿದೆ. ಜುಲೈ 11ರಂದು ಕಿರಿಯ ವಿದ್ಯಾರ್ಥಿ ಮೇಲೆ ಪ್ಲಸ್‌ಟು ತರಗತಿಯ ಐವರು ವಿದ್ಯಾರ್ಥಿಗಳ ತಂಡ ರ‌್ಯಾಗಿಂಗ್ ನಡೆಸಿತ್ತು. ಶಾಲಾ ಅಧಿಕಾರಿಗಳು ಈ ಐವರು ವಿದ್ಯಾರ್ಥಿಗಳನ್ನು ಅಮಾನತುಗೊಳಿಸುವ ತೀರ್ಮಾನ ಕೈಗೊಂಡಿತ್ತು.