ಜಿಲ್ಲೆ

ವಿಶಿಷ್ಟ, ಶ್ಲಾಘನೀಯ ರಾಗಾಲಾಪ : ರವೀಂದ್ರ ಜೋಶಿ ಮೆಚ್ಚುಗೆ

ಸೌಮ್ಯ ಆರ್

ಕಾಸರಗೋಡು: ರಾಗಾಲಾಪ ಕಾರ್ಯಕ್ರಮ ವಿಶಿಷ್ಟ ಹಾಗೂ ಶ್ಲಾಘನೀಯ ಎಂದು ಖ್ಯಾತ ಪತ್ರಕರ್ತ ರವೀಂದ್ರ ಜೋಶಿ ತಿಳಿಸಿದರು. ಕಾಸರಗೋಡು ಕರಂದಕ್ಕಾಡಿನ ಪದ್ಮಗಿರಿ ಕಲಾ ಕುಟೀರದಲ್ಲಿ, ರಂಗ ಚಿನ್ನಾರಿ ಕಾಸರಗೋಡಿನ ಅಂಗ ಸಂಸ್ಥೆ ಸ್ವರ ಚಿನ್ನಾರಿ ವತಿಯಿಂದ ಆಯೋಜಿಸಲಾಗಿದ್ದ ‘ರಾಗಾಲಾಪ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಮ್ಮಟದ ನಿರ್ದೇಶಕ ವಿ.ಮನೋಹರ್ ಹಾಡಿನ ಮೂಲಕ ಪ್ರಾತ್ಯಕ್ಷಿಕೆ ನೀಡಿದರು. ನೇತ್ರತಜ್ಞ ಡಾ.ಅನಂತ ಕಾಮತ್ ಶಿಬಿರ ಉದ್ಘಾಟಿಸಿದರು. ಸ್ವರ ಚಿನ್ನಾರಿ ಗೌರವಾಧ್ಯಕ್ಷ ಶ್ರೀಕೃಷ್ಣಯ್ಯ ಅನಂತಪುರ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ನಾರಿ ಚಿನ್ನಾರಿಯ ಕಾರ್ಯಾಧ್ಯಕ್ಷೆ ಸವಿತಾ, ರಂಗ ಚಿನ್ನಾರಿ ನಿರ್ದೇಶಕ ಕೆ.ಸತೀಶ್ಚಂದ್ರ ಭಂಡಾರಿ ಉಪಸ್ಥಿತರಿದ್ದರು. ರತ್ನಾಕರ ಓಡಂಗಲು ಪ್ರಾರ್ಥನೆ ಹಾಡಿದರು. ರಂಗ ಚಿನ್ನಾರಿಯ ನಿರ್ದೇಶಕ ಕಾಸರಗೋಡು ಚಿನ್ನಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಸ್ವರ ಚಿನ್ನಾರಿಯ ಕಾರ್ಯಾಧ್ಯಕ್ಷ ಪುರುಷೋತ್ತಮ ಕುಪ್ಪಳ್ ಸ್ವಾಗತಿಸಿದರು. ಸಾಹಿತಿ ಗಣೇಶ್ ನಾಯಕ್ ಮಂಜೇಶ್ವರ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಕಿಶೋರ ಪೆರ್ಲ ವಂದಿಸಿದರು.

ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಶಿಬಿರ ನಿರ್ದೇಶಕ ಮನೋಹರ್ ಪ್ರಮಾಣಪತ್ರ ವಿತರಿಸಿದರು. ಶಿಬಿರಾರ್ಥಿಗಳಾದ ಅನುಪಮಾ ಉಡುಪುಮೂಲೆ ಮತ್ತು ಶ್ರೀಪತಿ ಭಟ್ ಅನುಭವ ಹಂಚಿಕೊಂಡರು.